Bhasaka
← Back to home

ಎಂದೆಂದಿಗೂ ಎರಡು ಒಂದಾಗವು

Author: ವಿಜಯದಾಸCategory: ಶ್ರೀಕೃಷ್ಣ
ಎಂದೆಂದಿಗೂ ಎರಡು ಒಂದಾಗವು | ಒಂದೆ ಕುಲದಲಿ ಜನಿಸಿದ ಪಕ್ಷಿಗಳು ಒಂದೇ ರೂಪಪಕ್ಷಿ ಒಂದರಲಿ ತಿರಗೋವು | ಒಂದೀಗ ಪಂಚವರ್ಣದ ಕೋವಿದಾ || ಒಂದೆಲ್ಲ ಸಮನೆಂದು ಪೇಳುತ ಬದುಕುವುದು | ಒಂದಕ್ಕೆ ಗುರುತು ಮತ್ತೊಂದಕ್ಕೆ ಯಿಲ್ಲ ||1|| ಒಂದೇ ಕೊಂಬಿನಲಿ ಎರಡು ಸೇರಿಕೊಂಡು | ಒಂದು ಸಾರವನುಂಬದೊಂದರಿಯದು || ಒಂದು ಬುದ್ಧಿಯಲ್ಲಿಪ್ಪದೊಂದು ಇರಲೊಲ್ಲದು | ಒಂದು ನಾನೆಂಬೋದು ಮತ್ತೊಂದು ಪೇಳದು ||2|| ಒಂದೀಗ ತನ್ನ ಫಲ ಪರರಿಗೆ ಕೊಡುವದು | ಒಂದು ತನ್ನ ಫಲ ತಾ ತಿಂಬೋದು || ಒಂದು ಏರು ಇಳಿವ ಮೆಟ್ಟಗಳು ಬಲ್ಲದು | ಒಂದೀಗ ಕಾಣದೆ ಕಮರಿ ಬೀಳುವದು ||3|| ಒಂದು ಸುಡಗಾಡು ಸಿದ್ಧ ಎಂದು ಕೂಗುವದು | ಒಂದು ಕೂಗುವದು ಪ್ರಸಿದ್ಧನೆಂದು || ಒಂದು ಬೆಳೆದಿಂಗಳೊಳು ಹರುಷದಲಿ ಆಡುವದು | ಒಂದು ಕತ್ತಲೆಯೊಳು ಆಡುವುದು ನಿತ್ಯಾ ||4|| ಒಂದಕೆ ಒಂದು ಸಂವಾದವನು ಮಾಡುವವು | ಹಾರುವುದು | ಒಂದು ಅರಿಯದು ಬಾಂಧವ ಪುರಂದರ ವಿಜಯವಿಠ್ಠಲನ್ನ | ಒಂದು ಪೊಂದಿತು | ಒಂದು ಪೊಂದದಲೆ ಹೋಯಿತು ||5||

Thoughts & Reflections

0

No reflections shared yet. Be the first to share your thoughts!

Share your thought