Bhasaka
← Back to home

ದಾಸನ ಮಾಡಿಕೊ ಎನ್ನ

Author: ಪುರಂದರದಾಸCategory: ಶ್ರೀಕೃಷ್ಣRaaga: ಚಂದ್ರಕೌಂಸ್Taala: ತ್ರಿತಾಲ
ದಾಸನ ಮಾಡಿಕೊ ಎನ್ನ - ಸ್ವಾಮಿ ಸಾಸಿರನಾಮದ ವೆಂಕಟರಮಣ || ದುರುಬುದ್ದಿಗಳನೆಲ್ಲ ಬಿಡಿಸೋ - ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ | ಚರಣಸೇವೆ ಎನಗೆ ಕೊಡಿಸೋ - ನಿನ್ನ ಕರಪುಷ್ಪವನೆನ್ನ ಶಿರದಲಿ ಮುಡಿಸೋ || ದೃಢಭಕ್ತಿ ನಿನ್ನಲ್ಲಿ ಬೇಡಿ - ನಾ - ನಡಿಗೆರಗುವೆನಯ್ಯ ಅನುದಿನ ಪಾಡಿ | ಕಡೆಗಣ್ಣಲೇಕೆನ್ನ ನೋಡಿ - ಬಿಡುವೆ ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ || ಮರೆಹೊಕ್ಕವರ ಕಾವ ಬಿರುದು - ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು | ದುರಿತಗಳೆಲ್ಲವ ತರಿದು - ಸಿರಿ ಪುರಂದರವಿಟ್ಠಲ ಎನ್ನನು ಪೊರೆದು ||

Thoughts & Reflections

0

No reflections shared yet. Be the first to share your thoughts!

Share your thought