Bhasaka
← Back to home

ಎಂದೊಡನಾಡುವೆ ಎಂದರ್ಥಿಬಡುವೆ

Author: ವಿಜಯದಾಸCategory: ಶ್ರೀಕೃಷ್ಣ
ಎಂದೊಡನಾಡುವೆ ಎಂದರ್ಥಿಬಡುವೆ ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಉತ್ಸವ ಮಂಟಪದೊಳಗೆ ಕುಳಿತು ಭಕ್ತ ವತ್ಸಲನೆಂದು ನುತಿಸಿಕೊಂಬನ ಕೂಡ ||1|| ಸಕಲ ಭೂಷಿತನಾಗಿ ಅಜಹರ ಸುರಮುನಿ ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ ||2|| ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ ಆ ಪುರೋಹಿತರಿಂದ ಕಲಿತುಕೊಂಬನ ಕೂಡ ||3|| ನಾಲ್ವತ್ತುಮೂರು ಪದಂಗಳು ಮಾಡೆಂದು ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ ||4|| ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ ಮಂಡೆಯಲ್ಲಿಟ್ಟ ಮಹಮಹಿಮನ ಕೂಡ ||5|| ಪಲ್ಲಕ್ಕಿ ಏರಿ ಪವಳಿಯ ಸುತ್ತಿ ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ||6|| ವಾರಶನಿ ಚತುರ್ದಶಿ ಕೃಷ್ಣಪುಷ್ಯದಿ ಈ ರೀತಿಯಲಿ ಕೂಡ ಇಂದಿರೇಶನ ಕೂಡ ||7|| ರೌದ್ರಿ ಸಂವತ್ಸರ ಅರ್ಧರಾತ್ರಿಯಲಿ ಭದ್ರ ಮೂರುತಿಯಾದ ಭವಹರ ಕೂಡ ||8|| ಗುರುಪುರಂದರ ಉಪದೇಶನ ಬಲದಿಂದ ಸಿರಿ ವಿಜಯವಿಠ್ಠಲನ ಚರಣ ತಕ್ರ್ಕೈಸಿ ||9||

Thoughts & Reflections

0

No reflections shared yet. Be the first to share your thoughts!

Share your thought