Bhasaka
← Back to home

ಎಚ್ಚತ್ತು ಇರು ಕಂಡ್ಯ ಮನವೇ

Author: ವಿಜಯದಾಸCategory: ಶ್ರೀಕೃಷ್ಣ
ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ | ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಆಡದಿರಪವಾದಗಳನು ಕೊಂ | ಡಾಡದಿರಿನ್ನು ಚಿಲ್ಲರೆ ದೈವತಗಳನು || ಬೇಡದಿರು ಭಯ ಸೌಖ್ಯವನು ನೀ | ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು||1|| ನರಜನ್ಮ ಬರುವದೆ ಕಷ್ಟ ಇದ- | ನರಿದು ನೋಡು ವಿಪ್ರಾದಿ ಶ್ರೇಷ್ಠ || ಮರಳಿಬಾಹುದು ಉತೃಷ್ಟ | ಮರುತ ಮತವ ಪೊಂದುವದು ದುರ್ಘಟ || ಕೇಳೆಲವೊ ಮರ್ಕಟ ||2|| ಹಾಳು ಹರಟೆಗೆ ಹೋಗಬೇಡ ನೀ ಕಂಡ | ಕೂಳನು ತಿಂದು ಒಡಲ್ಹೊರಿಯಬೇಡ || ಕಾಲ ವ್ಯರ್ಥ ಕಳಿಯ ಬೇಡ ನಮ್ಮ | ಪ್ರಾರಬ್ಧ ಭೋಗಕ್ಕೆ ಮನ ಸೋಲಬೇಡ || ಶ್ರೀ ಹರಿಯ ದಯಮಾಡ ||3|| ಅನ್ಯ ಸ್ತ್ರೀಯರ ನೋಡ ಬೇಡಾ ಹಿಂದೆ | ಮಣ್ಣುಕೂಡಿದವರ ನೀ ನೋಡಾ || ಅನ್ಯ ಶಾಸ್ತ್ರವನೋದಬೇಡಾ ನಮ್ಮ | ಪೂರ್ಣಪ್ರಜ್ಞರ ಬೋಧ ತಿಳಿದಕೊ ಗಾಢಾ || ಮೈ ಮರೆತಿರಬೇಡಾ ||4|| ಗೋ ವಿಪ್ರರ ಸೇವೆ ಮಾಡು ಸೋಹಂ | ಭಾವಗಳನು ಬಿಟ್ಟು ದಾಸತ್ವ ಕೊಡು || ಕೇವಲ ವೈರಾಗ್ಯ ಮಾಡು ವಿಜಯ || ಝಾವಗಳಲ್ಲಿ ಶ್ರೀ ಹರಿಯ ಕೂಡ್ಯಾಡೊ || ಲಜ್ಜೆಯ ಈಡ್ಯಾಡೊ||5|| ನಾನು ಎಂಬುದು ಬಿಡು ಕಂಡ್ಯ ಎನ್ನ | ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ || e್ಞÁನಿಗಳ ಒಳಗಾಡು ಕಂಡ್ಯ ವಿಷಯ | ಜೇನೆಂದು ಮೆದ್ದರೆ ಅದು ವಿಷ ಕಂಡ್ಯಾ || ಬೀಳುವಿ ಯಮಗೊಂಡಾ ||6|| ಕಷ್ಟ ಪಡದೆ ಸುಖಬರದು ಕಂ- | ಗೆಟ್ಟ ಮೇಲಿನ್ನು ಕಷ್ಟ ತಿಳಿಯೋದು || ದುಷ್ಟ ವಿಷಯ ಆಶೆ ಜರಿದು ವಿಜಯ- | ವಿಠ್ಠಲರಾಯನ ಹೊರತು ಮುಕ್ತಿ ಬಾರದು || ಕೂಗೆಲವೊ ಬಾಯಿ ತೆರೆದು ||7||

Thoughts & Reflections

0

No reflections shared yet. Be the first to share your thoughts!

Share your thought