Bhasaka
← Back to home

ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ

Author: ವಿಜಯದಾಸCategory: ಶ್ರೀಕೃಷ್ಣ
ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ | ಎನಗೆ ನಿನಗೆ ನ್ಯಾಯ ಪೇಳುವರಿಲ್ಲ ಒಂದುಗೂಡಿಲಿ ಬಂದು ಒಂದು ಕ್ಷಣ ವಗಲದೆ | ಯೆಂದೆಂದು ನಿನ್ನ ಪಾದ ಪೊಂದಿರಲೂ || ಬಂದ ವಿಷಯಂಗಳಿಗೆ ಯೆನ್ನನೊಪ್ಪಿಸಿ ಕೊಟ್ಟು | ನೀನಂಧಕನಂತೆ ನೋಡುವದುಚಿತವೆ ರಂಗಾ ||1|| ಪರಸತಿಯರ ಕೂಡಿದರೆ ಪರಮ ಪಾತಕವೆಂದು | ಪರಿ ಪರಿಯ ನರಕಗಳ ನಿರ್ಮಿಸಿರುವಿ || ಪರಸತಿಯರೊಲುಮೆ ನಿನಗೊಪ್ಪಿತೆಲೋ ದೇವಾ | ನಿನ್ನ | ದೊರೆತನಕಂಜಿ ನಾ ಶರಣೆಂಬೆನಲ್ಲದೇ ||2|| ನಿನ್ನಾಜ್ಞ್ಞಧಾರನಾಗಿ ನಿನ್ನ ಪ್ರೇರಣೆಯಿಂದ | ಅನೇಕ ವಿಧಕರ್ಮಗಳ ಮಾಡುತಿರುವೇ || ಯೆನ್ನಪರಾಧಗಳ ವರ್ಣಿಸಲಾಗದೊ | ದೇವ | ಪನ್ನಂಗಶಯನ ಶ್ರೀ ವಿಜಯವಿಠಲನೇ ||3||

Thoughts & Reflections

0

No reflections shared yet. Be the first to share your thoughts!

Share your thought