Bhasaka
← Back to home

ಎನ್ನ ಪಾಲಿಸುವುದಾನಂತ ಶಯನ

Author: ವಿಜಯದಾಸCategory: ಶ್ರೀಕೃಷ್ಣ
ಎನ್ನ ಪಾಲಿಸುವುದಾನಂತ ಶಯನ | ಚನ್ನ ಗರುಡವಾಹನಾ | ಇನ್ನು ನಿನ್ನಯ ಪಾದವನ್ನೆ ಸೇರಿ ಕೌಂಡಣ್ಯ| ಮುನಿಗೊಲಿದನಂತ ಗುಣಾರ್ಣವಾ ದೇವಾ ನಂಬಿದವರ ನೋವ ಕಳೆದು ಬಿಡದೆ | ಕಾವ ಬೇಡಿದ ವರವ ನೀವ ಮೂರು | ಭುವನ ಜೀವ ವಿಮಲರಾ | ಜೀವ ನಯನ ವಸುದೇವ ದೇವಕಿತನು | ಭವನೆ ಭವದೂರ ದುರ್ಜನ ಸಂಹಾರ | ದೇವತಾ ವರ ಸಂಜೀವಾ ಪ್ರಭಾವಾ||1|| ಸೂರ್ಯಕೋಟಿ ಪ್ರಕಾಶಾ | ಚಾರ್ಯನಾ ನಾಯಕಾಧೀಶಾ | ಧೈರ್ಯವುಳ್ಳ ಸರ್ವೇಶಾ | ಕಾರ್ಯರೊಳು ವಿಶೇಷಾ | ಕಾರ್ಯವಂತನೆ ಈಶಾ | ತುರ್ಯಮಹಿಮಾ ಸುರ ವರ್ಯ ಮನ್ಮಥನಯ್ಯಾ | ಮರ್ಯಾದಿಯಲಿ ಬಲು | ವೀರ್ಯದಲಿ ಮತಿ | ಧಾರ್ಯನ ಮಾಡೋದು | ನಿರ್ಯಾಣ ಸಮಯಕ್ಕೆ ||2|| ಬಂದು ಮತ್ಸ್ಯಾದಿ ತೀರ್ಥ | ಬಂದು ಬಲು ಸಮರ್ಥ | ನೆಂದು ಬೇಡಿದೆ ಪುರುಷಾರ್ಥ | ಇಂದು ಕರುಣಿಸು ಕರ್ತಾ | ಬೆಂದು ಪೋಗಲಾರ್ಥ | ಮುಂದುಣಿಸು ಸುಧಾರ್ಥ | ತಂದು ನೀನೆ ಮುಕ್ತ್ತಾರ್ಥ | ಬಂದು ವೈತಿರುವಾ ನಂದು ರೂಪವನೆ | ಸಿಂಧುಶಯನ ಆ ನಂದ ವಿಜಯವಿಠ್ಠಲೆನ್ನ ಪಾಲಿಸೋ||3||

Thoughts & Reflections

0

No reflections shared yet. Be the first to share your thoughts!

Share your thought