Bhasaka
← Back to home

ಎನ್ನಲ್ಲಿ ಅವಗುಣ ಶತಸಾವಿರವಿರೆ

Author: ವಿಜಯದಾಸCategory: ವೈರಾಗ್ಯ
ಎನ್ನಲ್ಲಿ ಅವಗುಣ ಶತಸಾವಿರವಿರೆ | ಅನ್ಯರ ಕರೆದಾನು ನಡತೆ ಇದೇನೆಂಬೆ ವೇದವನೋದಿದೆ ಪರರಿ | ಗಾದರಿಸಿ ಮುಕುತಿಗೆ | ಸಾಧನೆ ಇದೆ ಎಂದು | ಹಾದಿಯವರಿಗೆ ಭೋದಿಪೆನಲ್ಲ್ಲದೆ ನಾನು | ಕ್ರೋಧ ಬಿಟ್ಟೆವನಲ್ಲ್ಲ ಹಾದರಹಳು ನಾರಿ | ಮಾದಿಗನ ಪೋದಂತೆ ||1|| ಧನದಾಸೆಯಿಂದ ಸಾಧನವಾಗದೆಂದು | ಜನರಿಗೆ ಉಪದೇಶವನು ಮಾಡುವೆ | ಮನೆ ಮನೆಯ ತಿರು ಮಾತಿನ ಬಣ್ಣವಲ್ಲ್ಲದೆ | ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ||2|| ರಸನೇಂದ್ರಿಯಗಳ ಬಂಧಿಸಬೇಕೆಂದು ನಾನು | ಉಸುರುವೆ ಅಲ್ಲಲ್ಲಿ ಕುಶಲನಾಗಿ | ಹಸನಾಗಿ ಹೇಯ ಬ | ಯಸುವೆನು ಅಮೃತ | ರಸವಲ್ಲೆನೆಂದಾವ ಮುಸುರಿಯ ಮೆದ್ದಂತೆ ||3|| ಒಡಿವೆ ವಸ್ತುಗಳು ಸಂಗಡ ಬಾರವು ಮಮತೆ | ಬಿಡು ಸಂಸಾರವಿದು ಕಡಿಗೆ ಭವದ | ಮಡವು ಸಿದ್ಧವೆಂದು ನುಡಿವೆನೊ ಪರರಿಗೆ | ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ ||4|| ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ | ಯುಕುತಿ ಬಾಯಲಿ ನಾರಕಕೆ ಸಾಧನಾ | ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ ಅ | ರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ ||5||

Thoughts & Reflections

0

No reflections shared yet. Be the first to share your thoughts!

Share your thought