Bhasaka
← Back to home

ಎಲ್ಲಡಗಿದನೊ ಹರಿ ಎನ್ನಯ ಧೊರಿ

Author: ವಿಜಯದಾಸCategory: ಶ್ರೀಕೃಷ್ಣ
ಎಲ್ಲಡಗಿದನೊ ಹರಿ ಎನ್ನಯ ಧೊರಿ ಎಲ್ಲೆಲ್ಲಿ ಪರಿಪೂರ್ಣನೆಂಬೊ ಸೊಲ್ಲನು ಮುನ್ನಾ ಅಲ್ಲಲ್ಲಿ ಪುಸಿಮಾಡಿ ಮಲ್ಲಮರ್ದನ ಪುಲ್ಲಲೋಚನ ಹರಿ ಶರಣೆಂದವರ ಕಾಯ್ವ ಕರುಣಾ ಸಮುದ್ರನು ಕರುಣನ ಅರಿಯದೆ ಹರಿಣಾಂಕ ನಿಭವಕ್ತ್ರ ||1|| ಕರಿರಾಜನ ಮೊರೆ ಕೇಳಿ ತ್ವರಿತದಿಂದ ಗರುಡನೇರಿ ಬಂದ ಗರ್ವರಹಿತ ದೇವ ||2|| ವರ ಭುಜದಲಿ ಶಂಖ ಚಕ್ರವ ಧರಿಸಿದ ಪರಮ ಸುಂದರಮೂರ್ತಿ ಪರಮೇಷ್ಠಿ ಜನಕನು ||3|| ವನಜ ಮಲ್ಲಿಗೆ ಜಾಜಿ ವನದಲ್ಲಿ ಚಲಿಸುವ ವನಿತೆಯರಾಟಕ್ಕೆ ಮನಮೆಚ್ಚಿ ನಡೆದಾನೊ ||4|| ಗೋವುಗಳ ಹಿಂಡು ಗೋಪಾಲರನು ಕಂಡು ಕಾವ ವಿಷಯಕ್ಕಾಗಿ ಕಮಲಲೋಚನ ಹರಿ||5|| ಇನ ಚಂದ್ರ ನಿಭವಕ್ತ್ರ ಕನಕಾಂಬರಧರ ವಿನಯದಿಂದಾಡುತ್ತ ಮುನಿಗಳಲ್ಲಿಗೆ ದೇವ ||6|| ಗಜ ಧ್ರುವ ಬಲಿ ಪಾಂಚಾಲಿ ವರದನೆಂಬ ನಿಜವಾದ ಬಿರುದುಳ್ಳ ವಿಜಯವಿಠ್ಠಲರೇಯ||7||

Thoughts & Reflections

0

No reflections shared yet. Be the first to share your thoughts!

Share your thought