Bhasaka
← Back to home

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ

Author: ವಿಜಯದಾಸCategory: ಶ್ರೀಕೃಷ್ಣ
ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ ಇಲ್ಲವೋ ಕಾಣೋ ಎಂದಿಗಾದರು ಮರುಳೆ ಹುಲಿ ಇಲಿಯಾಗುವುದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಲನ್ನೀಗ ಬಳಿವ ಖಳ ಮಹಾಚೋರ ಚೊಚ್ಚಿಲಗೌಡಿ ಮಗನಾಹ ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ||1|| ಕರಡಿ ಕರುವಾಗುವುದು ಉರಿ ಮಂಜು ಆಗುವುದು | ಕರಿ ನಾಯಿಯಾಗುವುದು ಕಂಡವರಿಗೆ | ಭರದಿಂದ ಸುರಿವ ಮಳೆ ನಿಲ್ಲೆನಲು ನಿಲ್ಲುವುದು | ನರಹರಿಯ ನಾಮಗಳ ನಂಬಿ ಭಜಿಪರಿಗೆ ||2|| ಫಣಿ ಸರಿವೆಯಾಗುವುದು ದಣುವಾಗುತಿಹ ಮಾರ್ಗ | ಕ್ಷಣದೊಳಗೆ ಪೋದಂತೆ ಕಾಣಿಸುವುದು | ಘನ ಪಾಷಾಣಗಳು ತೃಣಸಮವು ಎನಿಸುವುವು | ವನಜಾಕ್ಷನ ಕೃಪೆಯ ಪಡೆದ ದಾಸರಿಗೆ ||3|| ಕ್ಷುಧೆ ತೃಷೆಯಾಗುದು ಕ್ಷುದ್ರ ಸಂಗವಾಗದು | ಪದೆಪದೆಗೆ ರೋಗಗಳು ಬೆನ್ನಟ್ಟವು | ಉದಯಾಸ್ತಮಾನಗಳೆಂಬ ಭಯ ಸುಳಿಯದು | ಪದಮನಾಭನ ಕೃಪೆಯ ಪಡೆದ ದಾಸರಿಗೆ ||4|| ಬಾರವು ಭಯಗಳು ಬಂದರೂ ನಿಲ್ಲವು | ಹಾರಿ ಹೋಗುವುವು ದಶ ದಿಕ್ಕುಗಳಿಗೆ | ಘೋರ ದುರಿತಾರಿ ಶ್ರೀ ವಿಜಯವಿಠ್ಠಲನಂಘ್ರಿ | ಸೇರಿದ ಜನರಿಗೆ ಇನಿತು ಭಯವುಂಟೆ||5||

Thoughts & Reflections

0

No reflections shared yet. Be the first to share your thoughts!

Share your thought