Bhasaka
← Back to home

ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ

Author: ವಿಜಯದಾಸCategory: ಶ್ರೀಕೃಷ್ಣ
ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ | ನಿಲ್ಲೊ ನಿಲ್ಲೊ ನಿನ್ನ ಕಂಡ ಮ್ಯಾಲಕೆ ಬಿಡೆ ಮೀನ ನಡೆದ ಹೆಜ್ಜೆಗಳು ಕಾಣದಂತೆ ಪೋಗಿ ನಡಗಿದೆ | ಬೆಟ್ಟದಡಿಯ ಅಂದು ಒಡನೆ ಮಣ್ಣುಕಚ್ಚಿ ಬಾಯಿದೆರದು ಆ | ರ್ಭಟಿಸಿದರೆ ನಿನ್ನ ಪೋಗಗೊಡುವೆವೇನೊ ||1|| ಬಲು ಉದ್ದ ಬೆಳೆದರೆ ನ್ಯಾಯದಿ ಸೋಲಿಸಿ | ಹೆಗ್ಗಲಿದಾ ಗಿಡದ ಬೇರು ಕಡಿಸುವೆನೊ | ಕಲಕಾಲಾ ಉಪವಾಸ ಮಾಡಲು ನಮಗೇನು | ಕಳವು ಹಾದರದಲ್ಲಿ ನಿಸ್ಸೀಮ ಪುರುಷನೇ ||2|| ಮಾಣಿಯ ತೋರಿಸಿದರೆ ನಿನಗಾರುರಂಜೋರೋ | ಪಾಣಿಯೊಳಗೆ ಖಡ್ಗ ಇದ್ದರಂಜೆ | ಕಾಣಿ ಪಾದಿದ್ದರೆ ಹಿಂದೆ ಸುಮ್ಮನಿದ್ದೆ | ಜಾಣತನವೇನೊ ವಿಜಯವಿಠಲ ಇಂದು ||3||

Thoughts & Reflections

0

No reflections shared yet. Be the first to share your thoughts!

Share your thought