Bhasaka
← Back to home

ಏಕಾದಶಿ ವ್ರತ ಶೋಧಿಸಿ

Author: ವಿಜಯದಾಸCategory: ಶ್ರೀಕೃಷ್ಣ
ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ ಮಾಡಿರೊ ಪಾಡಿರೊ | ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ ದಶಮಿ ಏಕಾದಶಿ ದ್ವಾದಶಿ ದಿನತ್ರಯ | ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ | ದಶರೆಲ್ಲ ಕೈ ಕೊಂಡು ಮಾಡಿದರಂದು ರಂ | ಜಿಸುವ ಸತ್ಕರ್ಮದಲ್ಲಿ | ಬಿಸಜನಾಭನು ಲಕುಮಿಗೆ ಪೇಳಿದ ವ್ರತ | ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ | ಋಷಿಗೆ ಅಜನು ಪೇಳಲಾ ಮುನಿ ಬೀರಿದಾ ದಶ ದಿಕ್ಕಿನೊಳಗೊಂದು ||1|| ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು | ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು ಹೃದಯದೊಳೀಪರಿ ಯೋಚಿಸಿ ಅe್ಞÁನ ಒಂದು ಕಡೆಗೆ ನೂಕಿ | ಸದಮಲನಾಗಿ ಸ್ನಾನಾದಿಯ ಮಾಡಿ ಮ ತ್ತದರ ತರುವಾಯ ದೇವತಾರ್ಚನೆ ಬಲು ವಿಧಿ ತಂತ್ರ ಸಾರದಿ ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ||2|| ಸಂಧ್ಯಾವಂದನೆ ದಿವ್ಯ ಮಂಗಳಾರುತಿ ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ | ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ | ಕುಂದದೆ ಸೂಸುತ ಗೆಳೆಯರ ಒಡಗೂಡಿ | ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ | ನಂದನ ಕಂದ ಮುಕುಂದನ ಮಧ್ಯದಿ ಇಂದು ಸ್ಥಾಪಿಸಿ ತುತಿಸಿ||3|| e್ಞÁನಿಗಳೊಡನೆ ಕುಳ್ಳಿದ್ದು ಸುe್ಞÁನಿಗಳು ಶುದ್ಧ ಗಾ| ಯನ ಮಾಡುತ ಹರಿಯ ಮಹಿಮಯನ್ನು ಆನನ ಕೂಗುತ ಹಾಡುತ ಪಾಡುತ | ಧ್ಯಾನವ ಗೈವುತಲಿ | ಮಾನಸ ಪೂಜೆಯೊಳಗೆ ರಚಿಸಿ ಮೇಲೆ ಕಾಣಬಾರದಂತೆ ಪ್ರಜೆದೊಳಗೆ ತೋರಿ | ನಾನೆಂಬೊ ಅಹಂಕಾರ ತೊರೆದು ಮಗುವಿನಂತೆ ಶ್ರೀನಿವಾಸನ ನೆನಸಿ ||4|| ತಾಳ ಝಾಗಟೆ ಮದ್ದಳೆ ತಂಬೂರಿ ಸಮ್ಮೇಳದಿಂದಲಿ ಕೂಡಿ ಸೋಗು ವೈಯಾರದಿ | ಕಾಲಲಿ ಗೆಜ್ಜೆಯ ಕಟ್ಟಿ | ವಲಯಾಕಾರ | ಮೇಲು ಚಪ್ಪಳೆಯಿಂದ | ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ | ಯಾಲಲಿ ಹರಿಯ ಸಂಕೀರ್ತನೆ ಕೀರ್ತಿಸಿ | ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ | ಶಾಲ ಭಕುತಿ ಒಲಿಸಿ ||5|| ಕಿರಿಬೆವರೊದಕ ಮೊಗದಿಂದಿಳಿಯಲು | ಉರದಲಿ ಇದ್ದ ದೇವಗೆ ಅಭಿಷೇಚನೆ | ಪರವಶವಾಗಿ ಮೈಮರೆದು ತಮ್ಮೊಳು ತಾವು | ಕರದು ತರ್ಕೈಸುತಲಿ | ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ | ಎರಡು ಭುಜವ ಚಪ್ಪರಿಸಿ ಏಕಾದಶಿ | ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ||6|| ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ || ಸದ್ವೈಷ್ಣವರುಗಳು ಹರಿ ಪರದೇವ ಮಧ್ವರಾಯರೆ ಮೂರು ಲೋಕಕೆ ಗುರುಗಳು | ಸಿದ್ಧಾಂತ ಮುನಿ ಸಮ್ಮತಾ | ಈ ಧರೆಯೊಳಗಿದನೆ ಮಾಡದ ನರ ಮದ್ಯ ಮಾಂಸ ಮಲ ಮೂತ್ರವನು ಕ್ರಿಮಿವ ಮನವು | ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ ||7|| ಸಾಗರ ಮೊದಲಾದ ತೀರ್ಥಯಾತ್ರೆಯ ಫಲ | ಭೂಗೋಳದೊಳಗುಳ್ಳ ದಾನ ಧರ್ಮದ ಫಲ | ಆಗಮ ವೇದಾರ್ಥ ಓದಿ ಒಲಿಸಿದ ಫಲ | ಯೋಗ ಮಾರ್ಗದ ಫಲವೊ | ಭಾಗವತರ ಸಂಗಡ ಚತುರ್ದಶ ಝಾವ ಜಾಗರ ಮಾಡಿದ ಮನುಜನ ಚರಣಕ್ಕೆ ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ ||8|| ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು | ತತ್ವ ವಿಚಾರದಿ ಸುಖಿಸಿ ದ್ವಾದಶಿ ದಿನ ಹೊತ್ತು ಪೋಗಾಡದೆ ಸದಾಚಾರ ಸ್ಮøತಿಯಂತೆ ಅತ್ಯಂತ ಪಂಡಿತ ಪಾವನ್ನ | ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ | ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು | ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ | ನಿತ್ಯ ಬಿಡದೆ ಕಾವಾ ||9||

Thoughts & Reflections

0

No reflections shared yet. Be the first to share your thoughts!

Share your thought