Bhasaka
← Back to home

ಏನು ಕಾರಣ ಬಂದೆ ಗಂಗೆ

Author: ವಿಜಯದಾಸCategory: ಶ್ರೀಗಂಗೆ
ಏನು ಕಾರಣ ಬಂದೆ ಗಂಗೆ | ನಾನೇನು ಪುಣ್ಯವನು ಮಾಡಿದವನಲ್ಲ ಕಾಸೀಪುರದಿಂದಲಿ ದೇಶ ನೋಡಲು ಬಂದ್ಯೋ | ಬೀಸಿ ಬಿಸುಟುವಂಥ ಅಸ್ಥಿಗಾರದೆ ಒಂದ್ಯೋ | ದಾಸರ ಮಹಿಮೆಯನು ನೋಡುವೆನೆಂದು ಬಂದ್ಯೋ | ದೋಷವರ್ಜಿತ ವಾರಣಾಸಿ ಕಡಿಯದಲೆ | ಲೇಸಾಗಿ ತಿಳಿಪುವದು ಭೀಷ್ಮನ ಜನನೀ ||1|| ತಿಲನೀರು ಕುಡಿದು ಧರಿಸಲಾರದೆ ಬಂದ್ಯೋ | ಮಲಜನರ ದೋಷವನು ಕಳೆವೆನೆಂದು ಬಂದ್ಯೋ | ಕಲಿಯುಗಕೆ ಈ ಕೃಷ್ಣಾ ಅಧೀನಳೆಂದು ಬಂದ್ಯೋ | ಸುಲಭ ತ್ರಿದದೇಶ್ವರಿ ಗಂಗೆ ತಡೆಯದಲೆ | ನಿಲಜಾಲೆ ತಿಳಿಪುವದು ನೀರಜ ನಯನೇ ||2|| ಸುರರ ನಿತ್ಯ ಕರ್ಮಗಳು ನೋಡಲಿ ಬಂದ್ಯೋ | ಮಜ್ಜನವ ಮಾಡಿಸಿ ಎನ್ನ ಪೊರಿಯಲು ಬಂದ್ಯೋ | ಮೂಜಗದೊಳು ಪೆಸೆರಾಗಿಪ್ಪೆನೆಂದು ಬಂದ್ಯೋ | ನಿರ್ಜನ ತಟನಿ ನಿರ್ಗುಣಸಾಂದ್ರೆ ತಡಿಯದಲೆ | ನಿಜವ ತಿಳುಪುವದು ವಿಜಯವಿಠ್ಠಲಸುತೆ ||3||

Thoughts & Reflections

0

No reflections shared yet. Be the first to share your thoughts!

Share your thought