Bhasaka
← Back to home

ಏನು ಕಾರಣ ಮತಿಯಿಲ್ಲ ಮನವೆ

Author: ವಿಜಯದಾಸCategory: ವೈರಾಗ್ಯ
ಏನು ಕಾರಣ ಮತಿಯಿಲ್ಲ ಮನವೆ ಹೀನಾಯವಾಡದಿರು ಪರರ ಗುಣಗಳ ಎಣಿಸಿ ಅವನ ಗೊಡವೆಯೇಕೆ ಅವನಾರು ನೀನಾರು | ಅವನ ಪಾಪಕ್ಕೆ ನೀ ಭಾಗಾದಿಯೆ | ಅವನುತ್ತಮನಾದಡವನೆ ಬದುಕಿದ ಕಾಣೊ ಅವ ಪುಣ್ಯಮಾಡಿದರೆ ಅವನ ಕುಲ ಉದ್ಧಾರ ||1|| ನಿನಗೆ ಕೊಡುವುದರೊಳಗೆ ಬೇಡ ಬಂದವನಲ್ಲ | ನಿನಗೆ ಅವನಿಗೆ ಏನು ಸಂಬಂಧವೊ | ಮನೆ ಒಡವೆ ವಸ್ತುಗಳ ಹಂಚಿಕೊಂಬುವುದಲ್ಲ | ಕ್ಷಣ ಕ್ಷಣಕೆ ಕ್ಲೇಶವನು ಮಾಡಿಕೊಂಬುದು ಸಲ್ಲ ||2|| ನಿನ್ನ ಗತಿ ಮಾರ್ಗಕ್ಕೆ ಅವನಡ್ಡ ಬಾಹನೆ | ನಿನ್ನಿಂದ ಪರಲೋಕ ಅವನಿಗುಂಟೆ | ನಿನ್ನೊಳಗೆ ನೀ ತಿಳಿದು ವಿಜಯವಿಠ್ಠಲನ್ನ | ಸನ್ನುತಿಸಿ ಭವರೋಗ ಬನ್ನವನು ಕಳೆಯೊ ||3||

Thoughts & Reflections

0

No reflections shared yet. Be the first to share your thoughts!

Share your thought