Bhasaka
← Back to home

ಏನು ಕಾರಣ ಮಲಗಿದಿಯೊ

Author: ವಿಜಯದಾಸCategory: ಶ್ರೀಕೃಷ್ಣ
ಏನು ಕಾರಣ ಮಲಗಿದಿಯೊ ಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ ಸೇತುಗಟ್ಟುವದು ಅಸಾಧ್ಯವೆಂದು ಮಲಗಿದೆಯಾ ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ ಪಾತಕ ಹರದೈತ್ಯ ಭಂಜಾ ತಿಳುಪುವದು ಜ್ಯೋತಿರ್ಮಯರೂಪ ದರ್ಭಶಯನಾ||1|| ವನವಾಸ ತಿರಗಲಾರೆನೆಂದು ಮಲಗಿದೆಯೊ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ ಜನನ ಮರಣರಹಿತ ರಾಮ ತಿಳುಹುವದು ಹನುಮ ವಂದಿತ ಪಾದ ಶ್ರೀದರ್ಭಶಯನಾ ||2|| ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ ಮುನಿಗಳು ಸ್ತೋತ್ರವ ಮಾಡಲು ಹಿಗ್ಗಿ ಮಲಗಿದೆಯೊ ಜನನಾಥ ಜಾನಕಿಕಾಂತ ತಿಳುಪುವದು ಎನಗೊಲಿದ ವಿಜಯವಿಠ್ಠಲ ದರ್ಭಶಯನಾ ||3||

Thoughts & Reflections

0

No reflections shared yet. Be the first to share your thoughts!

Share your thought