Bhasaka
← Back to home

ಏನು ಪವಮಾನಿ ಏನು ಪವಮಾನಿ

Author: ವಿಜಯದಾಸCategory: ಶ್ರೀಹನುಮಂತ
ಏನು ಪವಮಾನಿ | ಏನು ಪವಮಾನಿ | ಈ ನಿಧಿಯಲಿ ಬಂದು ನಿಂದ ಕಾರಣ | ಮಾಣದೆ ಪೇಳು ನಿ | ದಾನದಿಂದಲಿ | ಮಾನಸದಲಿ | ದಾನವಾರಿಯ | ಧ್ಯಾನ ಮಾಡುವ ಜಾಣ ಜಗದ ಪ್ರಾಣ ಸುಂದರಾ | ನಾನಾ ಮಹಿಮಾ ಗುರುವೆ ಕೇಸರಿನಂದನ ಪಾಶವಿನಾಶ ನಿರ್ದೋಷ | ದಾಸರನ ಪಾಲಿಸುವ ವಾನರೇಶನೆ ಭಾರತೀಶ ಈಶಾ | ಶೇಷಾದ್ಯರಿಗುಪದೇಶದ ಕರ್ತಾ | ಲೇಸು ಸದ್ಗುಣಗಣ ಕೋಶ ಸರಸಿಜಾಸನ ಪದವಿಗೆ ಸೇರುವಾತಾ || ದೇಶದೊಳು ಬಲುಭೂಷಣ ಪಾಕಶಾಸನ ಶರದ ಶರೀರ | ದಾಶರಥಿ ಪಾದಾಸರವಿಡಿ | ದೇಸು ಬಗೆಯಲಿ | ಮೋಸ ಪೋಗದಾಯಾಸಬಡದಲೆ | ಮೀಸಲ ಮನ ಸೂಸು ವನರಾಸಿ ಲಂಘಿಸಿ ||1|| ವಾಸವವಿನುತಾ ನೀನಾ | ಕಾಶಕ್ಕೆ ಅಡರಿ ಪರಿಸರ ಪೋಗಲಾಸಮಯದಲ್ಲಿ | ದ್ವೇಷವನು ತಾಳಿ ರಕ್ಕಸಿ ಬರಲವಳ ಸೀಳಿ | ಮೈನಾಕೆಂಬ ಶೈಲ ಮನ್ನಿಸಿ ಭಾಸುರ ಲಂಕೆ | ಯ ಶೋಧಿಸಿದನಾ ಗೋ | ಸಾಸಿರವಿತ್ತು ಕೂಸಿನಂದದಲಿ || ಭಾಷಿಯನಾಡಿ ಪದ್ಮಾಸನಿಗೆ ಸಂ | ತೋಷವ ಪೇಳದ ಪ್ರಕಾಶಿತ ದುಂಗುರ ಭೂಸುತೆಗೆ ಯಿತ್ತು ರೋಷದಲ್ಲಿ ವನಸಮುದಾಯವ ಸವರಿ ಫಲ ಸವಿದು ಖಳನ ನಗುತ | ನಾಶಗೊಳಿಸಿದ ಸಮರ್ಥನೆ ||2|| ಹಿಂದೆ ಪ್ರಳಯದಲ್ಲಿಂದಿರೇಶನು ಸುರ್ವೃಂದ ಉದರದೊಳು | ಪೊಂದಿಟ್ಟುಕೊಂಡು ಆಗ | ಅಂದು ನೀನೊಬ್ಬನೇ ಮಂದನಾಗದೆ ನಯದಿಂದಲಿ ಎಚ್ಚತ್ತು | ಪೊಂದಿಕೊಂಡು ಇದ್ದೆ | ಇಂದು ಕದನದೊಳು ಇಂದ್ರಜಿತನು ಕರದಿಂದ ಸೆಳೆದ ಶರ | ದಿಂದಲಿ ಸಿಗಿಬಿದ್ದು | ಬಂಧಿಸಿಕೊಂಡಂಜಿನಿಂದಂತೆ ಮೈದೆಂದಿಗಿಲ್ಲದಂತೆ ನಂದವ ತೋರಿದೆ ಇಂದು ಮೌಳಿಯ ಪೊಂದಿದದಶ | ಕಂಧರನ ಮೊಗ ಮುಂದೆ ಭಂಗಿಸಿ | ಬಂದು ಗುದ್ದಿಲಿನೊದ್ದನು ಅವನಿರೆ | ಮಂದಹಾಸದಲಿಂದ ನಗುತ ||3|| ಪುರವನುರುಹಿ ಅಸುರರ ಸದೆದು ತೀ | ವರದಿಂದ ಶರಧಿಯ ಮರುಳೆ ಹಾರಿ ಬಂ | ದುರವಣಿಯಿಂದ ಶ್ರೀ | ಹರಿ ಚರಣಕ್ಕೆರಗಿ ಪೊಡಮಟ್ಟು | ಕರವನೆ ಮುಗಿದು | ಗುರುತು ಚೂಡಾಮಣಿ ಇಡೆ ಮುಂದೆ ವಿವರಿಸಿದೆ | ರಿಪುಗಳಾ | ಗರದ ವಿಸ್ತಾರ | ಸುರರು ಭಾಪುರೆ ಎಂದಂಬರದಲಿವಾದ್ಯ | ಬೆರೆದಲ್ಲಿ ಮೊರೆಯಾಗಿ ಅರಮರೆಯಿಲ್ಲದೆ | ಕರಡಿ ವಾನರ ನೆರೆಸಿ ಗಿರಿಗಳ ತರಿಸಿ ಮಾರ್ಗವಸರದಲಿ ವಿಸ್ತರಿಸಿ | ಧುರದೊಳಗರಿಗಳಿಂದಲಿ ಮರಣವಾದವರನ ಎಬ್ಬಿಸಿ ||4|| ಪಾತಾಳದೊಳು ಹತ್ತು ತಲೆಯವನಿರಲು ಕಾತುರದಿಂದ ಹೋ ಮಾತುರಕಾರ್ಚಿಸೆ | ಮಾತು ಮುಂಚದ ಮುನ್ನ ಭೀತಿ ಇಲ್ಲದೆ ಪೋಗಿ | ಪಾತಕನವಧಾನ | ಧಾತುಗೆಡಿಸಿದೆ | ದಾತಗೆ ದಿವ್ಯವರೂಥವೆಂದೆನಿಸಿ ವಿ| ಧೂತ ರಾವಣನ ವಿ | ಪಾತನ ಗೈಸಿದೆ | ಪ್ರೀತಿ ಬಡಿಸಿ ನಿಜಾರಾತಿ ವಿಭೀಷಣಗೆ ತಪ್ಪದೆ ಲಂಕಾ | ನಾಥನ ಮಾಡಿ ನೀ | ನೀತೆರದಲಿ ಸೇತುಪತಿ ಸಾಕೇತಪುರಿ ರಘುನಾಥನ ಯಡೆ ನೀ ತೆಗೆದುಂಡೆ | ಶ್ರೀ ತರುಣೇಶ ವಿಜಯವಿಠ್ಠಲನ ದೂತಾ ಹನುಮಾ ||5||

Thoughts & Reflections

0

No reflections shared yet. Be the first to share your thoughts!

Share your thought