Bhasaka
← Back to home

ಏನು ಪೇಳಲಿ ತೀರ್ಥಪತಿಯ ಮಹಿಮೆ

Author: ವಿಜಯದಾಸCategory: ಶ್ರೀಕೃಷ್ಣ
ಏನು ಪೇಳಲಿ ತೀರ್ಥಪತಿಯ ಮಹಿಮೆ ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ ಈಶನುಪದೇಶದಿಂದಲಿ ವಿಗತ ಜನನಾಗಿ ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ ||1|| ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ ಇರಲು ಕಾಲಾಖ್ಯ ಉರಗನು ಕಚ್ಚಲು ಪರಮಭೀತಿಯಿಂದ ಅವಳ ವಸನವ ತಂದು ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು ||2|| ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು ನಿಲ್ಲದೆ ಸನ್ಮುಕ್ತಿ ಧರನಾಗುವಾ ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ ಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ ||3||

Thoughts & Reflections

0

No reflections shared yet. Be the first to share your thoughts!

Share your thought