Bhasaka
← Back to home

ದೇವಕಿನಂದನ ಹರಿ

Author: ಪುರಂದರದಾಸCategory: ಶ್ರೀಕೃಷ್ಣRaaga: ಭೈರವೀTaala: ತ್ರಿತಾಲ
ದೇವಕೀನಂದನ ಹರಿ ವಾಸುದೇವ || ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸವಾಹನಮುಖವಂದಿತಚರಣ || ಶಂಖಚಕ್ರಧರ ಶ್ರೀಗೋವಿಂದ ಪಂಕಜಲೋಚನ ಪೂರ್ಣಾನಂದ| ಮಕರಕುಂಡಲಧರ ಶತರವಿಭಾಸ ರುಕ್ಮಿಣಿವಲ್ಲಭ ಸಕಲಲೋಕೇಶ || ನಿಗಮೋದ್ದಾರ ನವನೀತಚೋರ ಖಗಪತಿವಾಹನ ಜಗದಾಧಾರ | ವರವೇಲಾಪುರ ಚನ್ನಪ್ರಸನ್ನ ಪುರಂದರವಿಟ್ಠಲ ಸದ್ಗುಣಪೂರ್ಣ ||

Thoughts & Reflections

0

No reflections shared yet. Be the first to share your thoughts!

Share your thought