Bhasaka
← Back to home

ಏನು ಮರುಳಾದೆಮ್ಮ ಯೆಲ ಭಾರತೀ

Author: ವಿಜಯದಾಸCategory: ಶ್ರೀಹನುಮಂತ
ಏನು ಮರುಳಾದೆಮ್ಮ ಯೆಲ ಭಾರತೀ | ವಾನರ ಕುಲ ನಿಕರ ಶ್ರೇಷ್ಠನಾದವಗೆ ಕಣ್ಣಿಲ್ಲದಂಜನೆಯ ಉದರದೊಳು ಜನಿಸಿ | ನಿನ್ನ ತೊರೆದು ಬ್ರಹ್ಮಚಾರಿಯಾಗಿ || ಹಣ್ಣಿಗಾಗಿ ಹೋಗಿ ವನವ ಕಿತ್ತೀಡ್ಯಾಡಿ | ಉಣ್ಣ ಕರದರೆ ಎಂಜಲೆಡೆವೈದ ಕಪಿಗೆ ||1|| ಪುಟ್ಟಿದನು ಗುರುತಲ್ಪಕನ ವಂಶದಲಿ | ನಟ್ಟಿರುಳೆ ಒಬ್ಬ ಅಸುರಿಯ ಕೂಡಿದಾ || ಹೊಟ್ಟೆಗಾಗಿ ಪೋಗಿ ಭಿಕ್ಷದನ್ನವನುಂಡ | ಅಟ್ಟು ಹಾಕುವನಾದ ಕುಲವ ಕೊಂದವಗೆ ||2|| ಮಂಡೆ ಬೋಳನಾಗಿ ಭೂಮಂಡಲ ಚರಿಸುವ | ಕಂಡವರಾರು ಈತನ ಗುಣಗಳಾ || ಪುಂಡರೀಕಾಕ್ಷ ವಿಜಯವಿಠ್ಠಲನ್ನ | ಕೊಂಡಾಡುತ ತಾ ಬೋರೆ ಗಿಡದ ಕೆಳಗಿಪ್ಪ ||3||

Thoughts & Reflections

0

No reflections shared yet. Be the first to share your thoughts!

Share your thought