Bhasaka
← Back to home

ಏನು ಸೇವಿಸಿದೆ ಗುರು ಯೆಲೊ ಮಾರುತಿ

Author: ವಿಜಯದಾಸCategory: ಶ್ರೀಹನುಮಂತ
ಏನು ಸೇವಿಸಿದೆ ಗುರು ಯೆಲೊ ಮಾರುತಿ | ಭಾನು ವಂಶೋತ್ತಮನೆ ನಿರುತ ಧಾರ್ಮಿಕನೆಂದು ಪೋತತನದಲಿ ಸೇರಿ ಅರ್ಕಜನ ಕರೆತಂದು ಮಾತಾಡಿಸಿ ಕೊಟ್ಟು ಮುದದಿ ಉದಧಿ | ಭೀತಿ ಇಲ್ಲದೆ ಹಾರಿ ಲಂಕಾಪುರವ ದಹಿಸಿ | ಸೀತೆ ವಾರ್ತೆಯ ತoದು ಪೇಳಿದಕೆ ಸುಫಲಾ ||1|| ಕೋತಿಗಳ ಕೂಡಿಕೊಂಡು ವನಧಿ ತೀರದಲಿಳಿದು ಭೂತಳವ ತಿರುಗಿ ಪ್ರತಾಪದಿಂದ | ಗೋತುರೋನ್ನತ ತಂದು ತಡಿಯದೆ ಪ್ರಖ್ಯಾತದಿ | ಸೇತುವಿಯ ಕಟ್ಟಿ ಕುಣಿದಾಡಿದದುಕೇನು ಫಲಾ ||2|| ಅಂದು ವಿಂಶತಿ ಹಸ್ತ ರಣದೊಳಗೆ ರಥವೇರಿ | ಬಂದಿರಲು ನೋಡಿ ಈ ಧನುರ್ಧಾರಿಯಾ ಸ್ಕಂದದ ಮೇಲೇರಿಸಿಕೊಂಡು ಗಗನಕೆ ಬೆಳೆದು ನಿಂದು ಚಾಲ್ವರಿದು ಬೊಬ್ಬಿರಿದದುಕ್ಕೇನು ಫಲಾ ||3|| ಒಂದೇ ಹಾರಿಕಿಯಲಿ ಜಿಗಿದು ಕುಪ್ಪಳಿಸಿ ನೀ | ಗಂಧಮಾದನಗಿರಿಯ ಕಿತ್ತು ತಂದು | ಅಂದದಲಿ ದೇವತತಿ ಕೊಂಡಾಡುತಿರೆ ಕಪಿ | ವೃಂದವೆಬ್ಬಿಸಿ ಖಳರ ಮಡುಹಿದದುಕ್ಕೇನು ಫಲಾ ||4|| ಅಪರಿಮಿತ ಉಪಕಾರ ಮಾಡಿದಲ್ಲದೆ ನಿನ್ನ | ಉಪವೀತ ಕೌಪೀನ ಬಿಡಿಸಲಿಲ್ಲಾ | ತಪಸಿವೇಷಿ ರಾಮ ವಿಜಯವಿಠ್ಠಲನೆ ಬಲು | ಕೃಪ ವನಧಿ ನಿಜವೆಂದು ತುತಿಸಿದದುಕ್ಕೇನು ಫಲಾ ||5||

Thoughts & Reflections

0

No reflections shared yet. Be the first to share your thoughts!

Share your thought