Bhasaka
← Back to home

ಏನೆಲವೊ ದೇವ ವೈಕುಂಠನಾಥಾ

Author: ವಿಜಯದಾಸCategory: ಶ್ರೀಕೃಷ್ಣ
ಏನೆಲವೊ ದೇವ ವೈಕುಂಠನಾಥಾ ನೀ ನಾರಿ ವೇಷವನು ಧರಿಸಿದ ಬಗೆ ಪೇಳೋ ದೈತ್ಯರುರುಬಿಗೆ ದೇವ ತತಿಗಳು ತಲ್ಲಣಿಸಿ ಮಿತ್ರ ಭಾವದ ಅವರ ಕೂಡಲಿಟ್ಟು ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು ಮಿತ್ರವೇಷ ಧರಿಸಿ ಸುರರ ಸಲಹಿದಾ ಬಗೆಯೊ ||1|| ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ ಕ ರವನಿಡುವೆನೆಂದು ಬರಲಾಗಲೂ ಅವನೀಶ ಭವಹರ ಕೇಶವ ನೀನೆ ಗತಿ ಎನಲೂ ಯುವತಿ ವೇಷವಧರಿಸಿ ಶಿವನ ಸಲುಹಿದ ಬಗೆಯೊ||2|| ಅಂದು ಮಾಡಿದ ಚರಿತೆ ಭಕ್ತಜನರು ಬಂದು ಒಂದು ದಿನ ನೋಡಿದವರಲ್ಲವೆಂದೂ ಇಂದು ಸತಿ ವೇಷವನು ಧರಿಸಿ ತೋರಿಸಿದೆಯೊ ಪುರಂದರದಾಸರಿಗೆ ಒಲಿದ ವಿಜಯವಿಠ್ಠಲ ಚೆಲುವಾ ||3||

Thoughts & Reflections

0

No reflections shared yet. Be the first to share your thoughts!

Share your thought