Bhasaka
← Back to home

ಏಳು ಏಳು ಏಳು ಲೋಕದ ಒಡಿಯನೆ

Author: ವಿಜಯದಾಸCategory: ಶ್ರೀಕೃಷ್ಣ
ಏಳು ಏಳು ಏಳು ಲೋಕದ ಒಡಿಯನೆ | ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ | ಏಳು ಅಪ್ರಾಕೃತ ಕಾಯಾ ಸುರಮುನಿ ಗೇಯಾ | ಏಳು ಗೋಪಾಲಕೃಷ್ಣ ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು | ಅರುಣವಾಯಿತು ಗಗನ | ಶರಧಿ ತೆರೆ ತಗ್ಗಿದವು ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ | ಸುರ ವೈರಿಗಳು ಅಡಗಲು | ಅರಳಿದವು ಅರವಿಂದ | ಪರಮ ಶೋಭನದಿ ಮಧುಕರಗಳು ಝಂಕರಿಸಿ ಶುಕಪಿಕ ಮೃಗಾದಿ ಯೆ-| ಚ್ಚರವಾಗೆ ಕಣ್ಣೆರಿಯೆ ಚರಣಾಯುಧನು ಕೂಗೆ | ಕರುಣಾಳುಗಳ ದೇವನೆ ||1 || ಸುರರು ದುಂದುಭಿ ಭೇರಿ ಮೊಳಗಿದವು | ಮೇರು ಪರ್ವತ ಮೇರೆ ತಪ್ಪಿ ಬಂದಾ ರಥಸಹಿತ ಭಾಸ್ಕರನು ದಿಶದಿಶೆಗೆ ಕಿರಣಗಳ | ಹರಹಿಕೊಳುತಾ | ಹರಿ ಗುರುವೆ ಪೇಳಲಳವೆ | ತರುಣಿಯರು ಎದ್ದು ಕಸ್ತ್ತೂರಿಯನು ಕಲಿಸಿ ಮಂದಿರದೊಳಗೆ ಎಳೆಬಾಳೆ | ಕರವುಗಳು ಪದ್ದಿ ಕರ್ಪುರದ ಚಳವಳಿದು | ಶೃಂಗರಿಸಿದರು ಅರವಿಂದನಾಭ ಚೆಲುವ ||2|| ಪರಮ ಮಂಗಳವಾದ ದ್ವಾರ ದ್ವಾರಗಳಿಗೆ | ವಿರಚಿಸಿತು ಕಳಿತೆ ತೋರಣ ಕನ್ನಡಿ ಮಲಕು | ಭರದಿಂದಲಿ ಬಿಗಿದು ಮೇಲ್ಕಟ್ಟು ಚಿತ್ತರದ ಗೊಂಬೆ | ಪರಿಚಾರವು ವಪ್ಪಲು | ಹಿರಿದು ಹೂವಿನ ಮಾಲೆ ಕಟ್ಟಿದವು | ಪರಿಮಳದ ದ್ರವ್ಯ ನಿಲುವಾದ ದರ್ಪಣ ಯಣ್ಣಿ | ಮಕರವು ತುರ ತೊ ಗರು ಪೊಗಳು ಕಾದೋದಕವು ತಂದಿರೆ | ಅರಸಾದ ಆದಿದೈವ||3|| ಪರಮ ಭಾಗವತರು ಬತ್ತೀಸರಾಗದಲಿ | ಸ್ವರವೆತ್ತಿ ಪಾಡುತಿದೆ | ಸರಿಗಮಪದನಿಸಾ | ಸ್ವರಮಂಡಲಾ ತಾಳ ತಂಬೂರಿ ಕಿನ್ನುರಿಗ ಸರವೇಣಿ ನಾನಾ ಗೀತ | ಸರಸ ವಿಲಾಸದಲಿ ಸೂತ ಮಾಘದ ಬಂದಿ ಪರಿ ಪರಿ ಕೊಂಡಾಡುತಿರಲು | ವಾರನಾರಿಯರು ಮದ್ದಳೆ ತಾಳ ಗತಿಯಲ್ಲಿ ಕುಣಿಯುತಿದೆ ಸುರನಿಕರ ಪರಿಪಾಲಿಕ ||4|| ಸುರ ನರೋರಗ ಯಕ್ಷಗರುಡ ಸಿದ್ಧ ವಿದ್ಯಾ | ಧರ ಸಾಧ್ಯ ಗಂಧರ್ವ ಚಾರಣ ಕಿನ್ನರ ಸಾಮ | ಸ್ತರ ಸಹಿತ ಪರಮೇಷ್ಟಿ ವಾಲಗಕೆ ಬಂದು ಎ- ದುರು ನಿಂದು ತುತಿಪನಾಹಕೊ ಭರಿತಾಭರಣವಿಟ್ಟು | ಸರಸ್ವತಿ ಭಾರತಿ ಗಿರಿಜೆ ಸುರನಾರಿಯರು ತಮ್ಮ | ಕರದಿಂದಲಿ ಹೊನ್ನ ಹರಿವಾಣ | ದಾರುತಿಯ ಪಿಡಿದು ನಿಂದೈಧಾರೆ ಶರಣಾಗತ ವತ್ಸಲಾ ||5|| ಕರಿ ತುರಗ ರಥಪಾಯದಳವು ದಟ್ಟಡಿಯಾಗಿ | ನೆರದಿದೆ ಸಭೆಯಲಿ ಸಪ್ತಾಂಗದವರುಂಟು | ಅರಿ ಶಂಖಗದಾ ಪದುಮಖೇಟ ನಂದನ ಮುಸಲಾ | ಪರಶು ನೇಗಲ ಸುಶಕ್ತಿ ಪರಿಪರಿಯ ದಿವ್ಯಾಯುಧವ ತಮತಮಗೆ | ಧರಿಸಿ ಸಂತೋಷದಲಿ ದಾತಾರ ನಿನ್ನಯ ಬರುವ ಹಾರೈಸಿ | ವೈರಿಗಳು ನೋಡುತಲಿ ಹಾರೆ ಕುರುವಂಶ ವಿನಾಶಕಾ ||6|| ಸುರಿಗೆ ಪಾರಿಜಾತದ ಮಲ್ಲಿಗೆ | ಸುರವನ್ನೆ ಬಕುಳ ಪಾರಿ ಭದ್ರ ಸಂಪಿಗೆ | ಮರುಗ ಮಲ್ಲಿ ಜಾಜಿ ಕಾಂಜಿ ಶಾವಂತಿಗೆ ಕರವೀರ ನಂದಾವರ್ತ | ಅರಗುಂದ ಕುಂತಾತಸಿದವನ ಮುಡಿವಾಳ | ಈರವಂತಿಕೆ ಕೇತಿಕಾ ಸರ್ವ ಕುಸುಮಗಳಿಗೆ | ಶಿರೋರತನವಾದ ಎಳದುಳಸಿ ಹಾರಗಳಿಗೆ | ಅರಿಗಳ ಮಸ್ತಕಾಂಕುಶಾ7 ಚರಣದಂದಿಗೆ ಪೆಂಡೆ ಪೊಂಗೆಜ್ಜಿ ಮಣಿಮಯದ | ಸರಪಳಿಯು ತೊಡೆದು ಬಿರುದಾವಳಿಗಳು ಪೀತಾಂ | ಬರದ ನೀಲಿ ಸೆರಗು ಮುಂಗಾಲಿಗಿಳಿಯ ವಿಚಿತ್ರವಾದ ಕಾಂಚಿ ದಾಮಾ | ಸರಿಗೆ ನ್ಯಾವಳಹಾರ ತುಳಸಿ ಕೌಸ್ತಭ ಪದಕ | ಸಿರಿವತ್ಸ ಕನಕಕುಂಡಲ ನೊಸಲ ಮೃಗನಾಭಿ | ಕರದಾಭೂಷ ಫಣಿಮಕುಟ ಧರಿಪಾ ದೇವಿ ನಿನ್ನ | ದರುಶನ ಭಕ್ತರಿಗೆ ಲಾಭಾ ||8|| ಸಿರಿ ಏಳಲೀಸಳೊ ಹತ್ತವತಾರವನು ಧರಿಸಿದ ದಣವಿಕಿಯ | ಕರಿ ಕಾಯಲಿ ಬಂದ ಭರದ ಉನ್ನತವು | ರಣದೊಳಗೆ ಪಾರ್ಥನ್ನ ರಥದ ತುರುಗವ ನಡಿಸಿದ ಲಜ್ಜೆಯ | ಸುರತ ಕ್ರೀಡೆಯಲಿ ಸ್ತ್ರೀಯರೋಳಾದಂಜಿಕಿಯೊ | ವರವ ಕೊಡು ಎಂದು ಬಂದು ಮಮ ಭಕ್ತರ ಭಯವೊ | ಸಿರಿ ವಿಜಯವಿಠ್ಠಲ ಉಡುಪಿಯ ಕೃಷ್ಣ ನಿನಗೆ | ದರಿಲ್ಲವೆಂಬೊ ಘನವೊ||9||

Thoughts & Reflections

0

No reflections shared yet. Be the first to share your thoughts!

Share your thought