Bhasaka
← Back to home

ಏಳು ಬೆಳಗಾಯಿತು ಯದುಕುಲೋತ್ತಮ

Author: ವಿಜಯದಾಸCategory: ಶ್ರೀಕೃಷ್ಣ
ಏಳು ಬೆಳಗಾಯಿತು ಯದುಕುಲೋತ್ತಮ | ವಾಲಗಕೆ ಪರಮೇಷ್ಠಿ ಹರ ಸುರಪಾಲಕರು ಹರ ಸುರಪಾಲಕರು ಬಂದರು ತಮ್ಮಯ ಆಳುಸಹಿತದಲಿ ರಂಗಾ ವೇದವನು ತಮ ಕದ್ದು ಒಯ್ದನು | ಆಧಾರಾಗದೆ ಅದ್ರಿ ಮುಣಗಿತು || ಮೇದಿನಿಯ ಬಳಕೊಂಡು ಹೋದನು | ಅದಿತಿಯ ಸುತನು ಭಾದಿಗಾಗದಲೆ ಬಂದು ಸಕಲರು || ಆದರಣೆಯಿಂದ ಕೈಯ ಮುಗಿದು ನೀ | ದಯಾನಿಧಿ ಎಂದು ಹೊರಗೆ ಕಾದು ಐದಾರೆ ರಂಗ ||1|| ಬಲಿಯ ಅಟ್ಟುಳಿ ಹೆಚ್ಚಿತು ವೆ ಗ್ಗಳಿಸಿದರು ಛತ್ರಿಯರು ಈರೈದು ತಲೆಯವನು || ಬಲವಂತನಾದನು ಆರಿಗೊಶವಿಲ್ಲ | ಇಳೆಗೆ ಭಾರವು ತೂಕವಾಯಿತು ಕಳ-| ವಳಗೊಳಲಾರೆವೆನುತಲಿ ಅಳುಕಿ ಭಯದಲಿ | ನಿಮ್ಮ ಬಾಗಿಲ ಬಳಿಯ ಸಾರಿದರೊ ರಂಗಾ||2|| ಮೂರು ಪುರದವರೀಗ ನಮ್ಮನ್ನ ಮೀರಿದರು | ಕಲಿಪುರುಷ ಸುಜನರ ಮೇರೆದಪ್ಪಿಸಿ ನಡೆಸಿ || ಬಲು ವಿಕಾರ ಮಾಡಿದನು ಈ ರೀತಿ ಶ್ರಮವೆಂದು | ಪೇಳಲು ಮಾರಪಿತ ಸಿರಿ ವಿಜಯ- || ವಿಠ್ಠಲ ಕಾರಣಾರ್ಧವ ಕಳೆದು | ಮುಂದೆ ಉದ್ಧಾರ ಮಾಡಿದನು ||3||

Thoughts & Reflections

0

No reflections shared yet. Be the first to share your thoughts!

Share your thought