Bhasaka
← Back to home

ಒಂದಾನೊಂದು ದಿವಸದಲ್ಲಿ

Author: ವಿಜಯದಾಸCategory: ಇತರೆ
ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು | ಚಂದದಿಂ ದ್ವಾದಶಿ ಸಾಧನೆ ಬರಲು ಅಂದದಿಂದ ಪುರಂದರದಾಸರಿ | ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ ಜಪಮಂತ್ರ ಹರಿಪೂಜೆಯನೆ ಮಾಡಿ || ಧಳಥಳಿಸುವ ವಿಠಲನ ದಿವ್ಯ ಪಾದ ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ ||1|| ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ | ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ || ಥಟ್ಟನೆ ವೇದಕ್ಕೆ ಸಮನಾದ ಪದಗಳು | ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು||2|| ಎಡೆಯೊಳು ಷಡ್ರಸದನ್ನವ ನೀಡೆ | ಕಡು ಮಮತೆಗಳಿಂದ | ಬಿಡದೆ ದಾಸರ ದಾರಿಯ ನೋಡಿ || ಯೆಡ ಬಲದಷ್ಟ ದಿವ್ಯದಿಂಡೆಯರೆಲ್ಲಾ | ಕಡೆಯದೆಶೆ ಧರಿಸಿದರು ದಾಸರಾ ||3|| ಹಗಲು ಒಂಭತ್ತು ತಾಸಾಗಿರಲು | ಆಗೆದ್ದು ಬೇಗ ಗುರುಗಳ ಸಮೀಪಕ್ಕೆ ಬರಲು || ಮುಗಿದು ಕರಯುಗ್ಮವ ಬಗೆ ಬಗೆ ಸ್ತುತಿಸುತಾ | ಜಗದೊಳು ನಾನಪರಾಧಿಯೆಂದರೂ ||4|| ಭೋಜನವ ಮಾಡಿ ಗುರುಗಳಂದು ಸಿಂಹಾಸನದಲ್ಲಿ | ರಾಜಿಸುತ್ತ ಬಂದು ಕುಳಿತಿರಲಂದೂ || ಆ ಜನದೊಡಗೀ ದಾಸರು ಕರೆಯಲು | ನೈಜಭಾವದಿಂದು ಬಂದು ಕುಳಿತರೂ ||5|| ಪದಗಳು ಬರದ ವಹಿಯಕೊಂಡು ಪೋಗಿ | ಮಧ್ವಶಾಸ್ತ್ರದ ಮೇಲೆ ಕುಳ್ಳಿರಲಾಗ || ಅದನರಿಯದೆ ದಿಂಡೆಯನೊಬ್ಬನು ಆ | ಪದವಹಿಯ ತೆಗೆದು ಬಿಸುಟನಾಗಾ ||6|| ಯೆರಡಾವರ್ತಿ ತೆಗೆಯಲು ಆಗ | ತಿರುತಿರುಗಿ ಬಂದು ವರಪುಸ್ತಕದ ಮ್ಯಾಲೆ ಕುಳ್ಳಿರಲಂದೂ || ಗುರು ವ್ಯಾಸರಾಯರು ನೋಡಿ ಹರುಷದಿಂದ | ಕರೆದು ಬೈದರವಗೆ ಕಡು ಮೂರ್ಖನೆಂದೂ ||7|| ಪದದೊಹಿ ತೆಗೆದು ಬಿಸಾಡಿದರೆ ತಿರುತಿರು ಗ್ಯದರಮ್ಯಾಲೆ ವರನಾಲ್ಕು ವೇದಾರ್ಥದರೊಳಗುಂಟು || ನರರುತ್ತಮರೆಲ್ಲ ನೋಡಿ ಹರುಷದಿಂದ | ಧರೆಯೊಳು ಪುರಂದರ ಉಪನಿಷತ್ತೆಂದರೂ ||8|| ಗುರುರಾಯರು ದಾಸರ ನೋಡಲಾಗ ಭರದಿಂದ ಯೆದ್ದು | ಅರಿವೆಯ ಕೈಯಿಂದೊರಸಲು ಆಗ || ತ್ವರಿತದಿ ಕೇಳಲು ವಿಠಲನ ಗುಡಿಯೊಳು | ಪಡದಗುರಿ ಹತ್ತವು ವರಿಸಿದೆವೆಂದರು ||9|| ಹಾಗೆಂದು ನುಡಿದಾಕ್ಷಣದಲಿ ಬೇಗ ಶಿಷ್ಯರಿಗೆ | ಹೋಗಿ ನೋಡಿ ಬಾರೆಂದೆನಲಾಗಿ || ಬೇಗದಿಂದಲಿ ಬಂದು ಕೇಳಲು ಅವರು | ಈಗ ದಾಸರು ಬಂದು ಪರಿಹರಿಸಿದರೆಂದು ||10|| ಆ ಮಾತು ಕೇಳಿದಾಕ್ಷಣದಿ ಬೇಗ | ಪ್ರೇಮದಿ ಬಂದು ಸ್ವಾಮಿರಾಯರಿಗೆ ಪೇಳಲು ಆಗ || ನಾಮವ ಸ್ಮರಿಸುತ ಪ್ರೇಮಾಲಿಂಗನವಿತ್ತು | ಕಾಮಿತಾರ್ಥ ಫಲವೀವ ಕಲ್ಪತರುವೆಂದರೂ ||11|| ಇಂತು ಅನುಭವ ಮಾತುಗಳನಾಡಿ ಲಕ್ಷ್ಮೀಕಾಂತನ | ಅಂತರಂಗದಲಿ ಅತಿಮಾನವ ಮಾಡಿ || ಕಾಂತಿ ಹೆಚ್ಚಿದ ಕಂತುಪಿತನ ಮೂರ್ತಿ | ಶಾಂತತ್ವದಿ ನೋಡುತ ಶರಣು ಮಾಡಿದರೂ ||12|| ಗಜಪುರದಲ್ಲಿ ಇರುವರು ಕೂಡಿ ವಿಜಯವಿಠ್ಠಲನ್ನ | ಭಜನೆಯಿಂದ ದಿನ ದಿನ ಪೊಗಳಿ || ತ್ರಿಜಗದೊಡೆಯ ಗುರು ಪುರಂದರವಿಠಲನ | ನಿಜ ವೈಕುಂಠದ ಮುಕ್ತಿಯೈದಿದರೂ ||13||

Thoughts & Reflections

0

No reflections shared yet. Be the first to share your thoughts!

Share your thought