Bhasaka
← Back to home

ಒಲಿದವಳ ಬಿಡುವುದು ಧರ್ಮವಲ್ಲ

Author: ವಿಜಯದಾಸCategory: ಶ್ರೀಕೃಷ್ಣ
ಒಲಿದವಳ ಬಿಡುವುದು ಧರ್ಮವಲ್ಲ | ಚಲುವ ನಿನಗಾಗಿ ನಾ ಯೇಸು ಕಾಲಕೆ ತಪವಿದ್ದೆ ತಂದೆತಾಯಿಗಳಲ್ಲಿ ಪುಟ್ಟಿದಾಕ್ಷಣದಲ್ಲಿ | ಅಂದೆ ನೇಮಿಸಿದರು ಪೆಸರನಿಟ್ಟು | ಸಂದೇಹಗೊಳದಿರು ಮೈಲಿಗೆಯವಳೆಂದು | ಬಂದ ಪ್ರಾಣವ ನೋಡು ಬರಿದೆ ಪೇಳುವಳಲ್ಲ ||1|| ಕನ್ಯಾವಸ್ಥಿಯಲಿಂದ ನಿನ ನಿನ್ನ ಧ್ಯಾನವಲ್ಲವೇ | ಅನ್ಯಪುರುಷರಾಪೇಕ್ಷೆ ಮಾಡಲಿಲ್ಲ | ಅನ್ಯಾಯವೇನು ಆಗಲಿ ಪೋಗುವರೇನೊ | ಅನ್ಯಥಾ ಈ ನುಡಿಗೆ ನಿಜಕೆ ನಿಲ್ಲುವೆ ನಾನು ||2|| ಮಲದಲ್ಲಿ ಮೂರುದಿನ ಪೋಗಾಗಿ ಹೋಗಿದ್ದೆ | ಬಲು ಶುಚಿಯಾದೆನೊ ಶುದ್ಧ ಜಲದಿ | ಘಳಿಗೆ ಕಡೆದರೆ ಎನ್ನ ಪ್ರಾಣನಿಲ್ಲವೊ | ಎನ್ನನಗಲಿ ಮೈ ತಪ್ಪಿಸಿ | ದೂರ ಕರೆದೊಯ್ಯೊ ಕರುಣದಲಿ ||3|| ನಗೆಗೇಡಿ ಮಾಡದಿರು ಜಗದೊಳಗೆ ಇಪ್ಪವಳ | ಸೊಗಸಿಗನೆ ಸರಸವಾಡುವನೆ ಬಾರೊ | ಮಗುಳೆ ಮತ್ತೊಬ್ಬರು ಮೆಚ್ಚಿದರೆ ಇದೆ ಪಾಟು | ಮಗುಳೇನು ಹೊಸ ಪರಿಯು ತೋರುವುದು ನೋಡಿದರೆ ||4|| ಕಂಡ ಕಾಣದ ಹಾಗೆ ಮಾತನಾಡಿದಿರೆನ್ನ | ಅಂಡೊಲಿವ ಖ್ಯಾತಿ ಎಂದಿಗೆ ತೀರದೂ | ಕುಂಡಲಿಗಿರಿವಾಸ ವಿಜಯವಿಠ್ಠಲ ವೆಂಕಟ | ಹಿಂಡು ಬಂಧುಗಳಿದ್ದರೇನು ಮಾನವನು ತೊರೆದೆ ||5||

Thoughts & Reflections

0

No reflections shared yet. Be the first to share your thoughts!

Share your thought