Bhasaka
← Back to home

ಒಳ್ಳೇದೋ ಒಳ್ಳೇದೋ ಎಲ್ಲ

Author: ವಿಜಯದಾಸCategory: ಶ್ರೀಕೃಷ್ಣ
ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು | ಇಲ್ಲಿ ಅಡಗಿದ ಬಲ್ಲಿದ ತನವೇ ಬಿಡೆ ಬಿಡೆನೊ ಎನ್ನ ಒಡಿಯ ತಿರುಮಲ ನಿನ್ನ | ಉಡಿಯ ಪೀತಾಂಬರ ಪಿಡಿದು ನಿಲಿಸಿಕೊಂಬೆ ||1|| ಎರವು ಎರವು ಮಾಡಿ ತಿರುಗಿಸಿದಿ ನೀ ಎನ್ನ ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ ||2|| ಅತ್ತ ಇತ್ತಲಿ ನೋಡಿನೆತ್ತ ಪೋಗಲಿ ಎನ್ನ | ಚಿತ್ತದಲಿ ನಿನ್ನ ಹತ್ತೆಗಟ್ಟಿಕೊಂಬೆ ||3|| ಅತ್ತಿಯ ಮಕ್ಕಳಿಗೆ ತೆತ್ತಿಗ ನೀನಾಗಿ | ವಿತ್ತವಿತ್ತದರಾದ ರಾಸಿ ಸಿರಿಯಲ್ಲಿ ||4|| ಇರಳು ಹಗಲು ಬಿಡದೆ ಗುರು ಪುರಂದರಗೊಲಿದೆ | ಬಿರಿದು ಏನೊ ಇಷ್ಟು ವಿಜಯವಿಠಲಾ||5||

Thoughts & Reflections

0

No reflections shared yet. Be the first to share your thoughts!

Share your thought