Bhasaka
← Back to home

ದೇವದೇವನ ನಿಜವನರಿಯಲು

Author: ವಚನವೇದCategory: ಪರಬ್ರಹ್ಮRaaga: ಕಾಫಿTaala: ತೇವರಾ
ದೇವದೇವನ ನಿಜವನರಿಯಲು ಮನವು ತೊಳಲುತ ಬಳಲಿದೆ | ಬೀಗಮುದ್ರೆಯನಿಟ್ಟ ಕೋಣೆಯೊ - ಳೆಲೆವ ಮರುಳನ ತೆರನಿದೆ || ದಿವ್ಯ ಪ್ರೇಮಕೆ ದೊರೆವನವನು ಶ್ರದ್ಧೆಗಲ್ಲದೆ ಒಲಿಯನು | ವೇದಶಾಸ್ತ್ರ ಪುರಾಣದರ್ಶನ- ದಾಚೆಗೇ ನಿಂತಿರುವನು || ಭಕ್ತಿಗೊಲಿಯುವ ಹೃದಯದಮೃತಾ - ನಂದರೂಪನು ಎಂಬರು | ಇದನರಿತೆ ಆ ಯೋಗಿವರ್ಯರು ಯುಗಯುಗವು ತಪಗೈದರು || ಭಕ್ತಿಯೆಚ್ಚರಗೊಳಲು ಎದೆಯಲಿ ಅವನೆ ನಿನ್ನನು ಸೆಳೆವನು | ಈ ರಹಸ್ಯವ ಜಗದ ಸಂತೆಯ ಜನ ಸಮೂಹಕೆ ತಿಳಿಸೆನು || ಶ್ರೀ ಪ್ರಸಾದನು ನುಡಿವನೀತೆರ “ಮಾತೃಭಾವದಿ ನೆನೆವೆನು | ನನ್ನ ಸೂಚನೆಯರಿತು ನೀವೇ ತಿಳಿಯಿರಾತನ ನಿಜವನು” ||

Thoughts & Reflections

0

No reflections shared yet. Be the first to share your thoughts!

Share your thought