Bhasaka
← Back to home

ಕಂಗೆಡದಿರು ಮನವೆ ಕಂಗೆಡದಿರು ಒಡನೊಡನೆ

Author: ವಿಜಯದಾಸCategory: ಶ್ರೀಕೃಷ್ಣ
ಕಂಗೆಡದಿರು ಮನವೆ ಕಂಗೆಡದಿರು ಒಡನೊಡನೆ ನೆರೆದು ಬಂದು ಜನಕೆ ಗ್ರಾಸವೆಂತಹುದೆಂದು ಅನುಮಾನ ಹಚ್ಚಿಕೊಂಡು ಬಡವಾಗದಿರೆಲೆ ಆಲೋಚನೆ ಮಾಡು ನಿನ್ನೊಳಗೆ ತಿಳಿದು ಮರಳಿ ಮರಳಿ ಘನಮಹಿಮ ನಾರಾಯಣ ಅನಾದಿ ಸ್ವಾಭಾವಿಕ ಚಿನುಮಯ ಸತ್ಯಸಂಕಲ್ಪ ದೇವ| ||1|| ಇನಿತು ಜೀವಿಗಳಿಗೆ ಕಾಲಕಾಲಕೆ ತೃಣ ಮೊದಲಾದ ಗ್ರಾಸ ಮಾಡಿಯಿಪ್ಪಾ ಕ್ಷಣಮಿರಗೊಡದೆ ಆವಲ್ಲಿಯಿದ್ದರೂ ವುಣಿಸುವ ಉಚಿತವನ್ನೆ ತಿಳಿದು ನೋಡಿ ದಿನ ದಿನಕೆ ಅಧಿಕವಿಲ್ಲಾ ತತ್ಪೂರ್ವ ಚೇತನಕೆ ನಿರ್ಮಾಣ ಮಾಡಿದಂತೆ ಬೊಮ್ಮಾ||2|| ಫಣಿತಿಯಲ್ಲಿ ಬರೆದಿರುವ ಆಯು:ಕರ್ಮವಿದ್ಯಾ ಧನ ನಿಧಾನನೆನೆಸಿ ಶ್ರೀಹರಿಯ ಆದಿ ಜನಿಸುವಾಗಲೆ ಅವರವರವಾಡಿಪನಾ ಕೊನೆಯ ಸೆರಗಿನಲಿ ಕಟ್ಟಿಹನೋ ನಿನಗೆ ಕಾಣಬಾರದೋ ಪದಶಾಸ್ತ್ರಗಳಿಂದೆ ಗುಣಿಸಿ ನೋಡಿದರೆ ಕಾರುಣಿಕವಹುದೊ ||3|| ಅಣುಮಾತ್ರನಿಂ ನಿಂದಾ ಆಗುವಾ ಶೌರ್ಯವೇನೋ ಅನುಭವಕೆ ತಂದುಕೊಂಡು ಗ್ಲಾನಿಯಾಗೋ ಮಿನುಗು ಚಿಂತೆಗಳಿಂದಾ ಬರುವ ಲಾಭವೇ ಕಾಣೆ ತನುವ ಶೋಷಿಸಿ ವಿರೋಧಾವಾಗಿ ಕೊಂಬೆ ಧನವಂತಾ ಸಿರಿ ನಮ್ಮ ವಿಜಯವಿಠಲರೇಯಾ ಮನುಜಾದಿ ದೇಹಿಗಳಿಗೆ ಸ್ವಾಮಿಯಾಗಿಪ್ಪನೋ ||4||

Thoughts & Reflections

0

No reflections shared yet. Be the first to share your thoughts!

Share your thought