Bhasaka
← Back to home

ಕಂಡೆ ಕಂಡೆನೊ ಕಂಗಳಲಿ

Author: ವಿಜಯದಾಸCategory: ಇತರೆ
ಕಂಡೆ ಕಂಡೆನೊ ಕಂಗಳಲಿ ಭೂ | ಮಂಡಲದೊಳು ಮೆರೆವ ಯತಿಗಳ ಮಂಡಲಾಬ್ಧಿಗೆ ಸೋಮನೆನಿಪ ಅ | ಖಂಡ ಮಹಿಮಾ ವಾದೇಂದ್ರ ಗುರುಗಳ ನಸುನಗಿಯ ಮೊಗ | ಪಸರಿಸಿದಾ ದ್ವಾದಶನಾಮಗಳು ಶ್ರೀ ಮುದ್ರೆ ಮುದದಿಂದ | ನೊಸಿಲಿಲೊಪ್ಪುವ ಗಂಧ ಅಕ್ಷತಿ ಎಸೆವ ಸಣ್ಣಂಗಾರ ಕಿವಿಯಲಿ ಹಸನಾದ ಎಳೆ ತುಲಸಿ ಶೋಭಿಸಿ | ಬೆಸಸುವ ಒಂದೊಂದು ಮಾತಾ | ಲಿಸಿದರದು ವೇದಾರ್ಥತುಲ್ಯಾ | ಲಸವ ಗೈಯಿಸದೆ ಬರುವ ಗುರುಗಳ||1|| ಮೊಸಳಿವಾಯಪಲಕ್ಕಿ ಸುತ್ತಾ ಭಾ | ರಿಸುವ ನಾನ ವಾದ್ಯಾದಾ ಘೋಷಾ | ಪುಸಿಕರೆದೆದಲ್ಲಣರು ಎಂಬಾ | ದಶ ದಿಕ್ಕಿನೊಳು ಕೀರ್ತಿ ತುಂಬಿರೆ | ಶಿಶುವು ಮೊದಲಾದವರು ತಮ ತಮ | ಬೆಸನೆ ಪೇಳಲು ಕೇಳಿ ಅವರು | ಬ್ಬಸವ ಕಳದಿಷ್ಟಾರ್ಥ ತೋರುವ ಋಷಿಕುಲೋತ್ತಮರಾದ ಗುರುಗಳ||2|| ಶ್ವಶನ ಮತ ವಾರಿಧಿಗೆ ಪೂರ್ಣ | ಶಶಿ ಎನಿಸಿಕೊಂಬ ಧೀರುದಾರರೆ | ಅಸಮ ತತ್ವ ಪ್ರಮೆಯದಲಿ ನಿರ್ಮಿಸಿದನೆ | ಲೋಕೇಶ ಇವರನ್ನ ವಸುಧಿ ಅಮರರು | ಪ್ರಸರ ಎಡಬಲ ಎಸದು ತುತಿಸಲು ಹಿಗ್ಗಿ ಕರುಣಾ | ರಸಭರಿತರಾಗಿ ನೋಡುತ್ತ ಮಾ | ಸನದಿ ಹರಿಪದ ಭಜಿಪ ಗುರುಗಳ||3|| ಕುಸುವಶರನ ಬಾಣವನು ಖಂಡ್ರಿಸಿ ಬಿಸುಟ ಸಂಪನ್ನ ವಿದ್ಯಾ | ವಸುವಿನಲಿ ಆವಾಗ ತಲೆ ತೂ | ಗಿಸುವರು ಪಂಡಿತರ ಮೆಚ್ಚಿಸಿ | ವಶವೆ ಪೊಗಳಲು ಎನಗೆ ಇವರ ದ | ರುಶನದಿಂದಲಿ ಗತಿಗೆ ಪಥನಿ | ವಿಷದೊಳಗೆ ಇದು ಸಿದ್ಧವೆಂದು ವಂ | ದಿಸಿದಿರೊ ಮರಿಯದೆ ಈ ಗುರುಗಳಾ ||4|| ಮಿಸುಣಿ ಮಂಟಪದೊಳಗೆ ರಂ | ಜಿಸುವ ರಾಮನ ಕುಳ್ಳಿರಿಸಿ ಅ | ರ್ಚಿಸುವ ಚಿತ್ತೇಕಾಗ್ರದಲಿ ವೊ | ಲಿಸುವ ತಂತ್ರ ಸಾರೋಕ್ತ ಬಗೆಯನು | ಕುಶಲರಾದ ಉಪೇಂದ್ರ ಮುನಿಕರ | ಬಿಸಜದಿಂದಲಿ ಜನಿಪ ಭಕುತಿಲಿ | ಅಸುರರಿಪು ಸಿರಿ ವಿಜಯವಿಠ್ಠಲನ್ನ | ಪೆಸರುಗಳು ಎಣಿಸುವ ಗುರುಗಳ ||5||

Thoughts & Reflections

0

No reflections shared yet. Be the first to share your thoughts!

Share your thought