Bhasaka
← Back to home

ಕಂಡೆ ಕಮಲನಾಭನ ಕಣ್ಣಾರೆ

Author: ವಿಜಯದಾಸCategory: ಶ್ರೀಕೃಷ್ಣ
ಕಂಡೆ ಕಮಲನಾಭನ ಕಣ್ಣಾರೆ ಪುಂಡರೀಕನ ಪಾಲಿನ ಪಂಡರಿವಾಸನ ಸಕಲ - ಬೊ ಮ್ಮಾಂಡವ ಧರಿಸಿದನಾ ಪ ಸುಲಭ ದೇವರ ದೇವ ನಾನಾ - ಪರಿ ಮಳ ತುಲಸಿಗೆ ವಲಿವನ ಕಲಿಕಾಲ ಸಲಹುವನ ಭವದ - ಸಂ ಕಲೆ ಪರಿಹರಿಸುವನ ||1|| ಲಿಂಗ ಸಂಗವನೀವನ ಜಗದಂತರಂಗ ಮೋಹನರಾಯನ ಮಂಗಳ ದೇವೇಶನ ಸಿರಿಪಾಂಡು ರಂಗ ನೆನಸಿಕೊಂಬನ||2|| ಜಗದ ಸದ್ಭರಿತ ನಾನಾ ವನದಿ ಬಿಗಿದ ಪರಾಕ್ರಮನಾ ನಗವನೆತ್ತಿದ ಧೀರನಾ ತನ್ನನು ಪೊಗಳಲು ಹಿಗ್ಗುವನಾ ||3|| ಯಾದವ ಶಿರೋರನ್ನನ ಕೊಳಲು ಊದುವ ಚೆನ್ನಿಗನಾ ಆದಿ ಪರಮ ಪುಂಸನ ಸರ್ವ ವೇದ ನಿಕರಮಯನಾ ||4|| ಇಟ್ಟಿಗೆಯಲಿ ನಿಂದನ ವರಂಗಳ ಕೊಟ್ಟರೆ ತಪ್ಪದವನ ಅಟ್ಟಿ ಖಳನ ಕೊಂದನಾ ವಿಜಯ ವಿಠ್ಠಲ ಜಗದೀಶನಾ ||5||

Thoughts & Reflections

0

No reflections shared yet. Be the first to share your thoughts!

Share your thought