Bhasaka
← Back to home

ಕಟ್ಟೆಯ ಕಟ್ಟಿದರು ಭವ ಸಾಗರಕೆ ಸ್ವಲ್ಪ

Author: ವಿಜಯದಾಸCategory: ಶ್ರೀಕೃಷ್ಣ
ಕಟ್ಟೆಯ ಕಟ್ಟಿದರು ಭವ ಸಾಗರಕೆ ಸ್ವಲ್ಪ ಬಿಟ್ಟು ವೇಗದಿಂದ ಸಾಧ್ಯ ಮಾಡಿಕೊಂಡು ಮೆಟ್ಟಿಕೆಯಿಂದಲಿ ದಾಟಿ ಪೋದರು ಜಗ ಜಟ್ಟಿ ದಾಸರು ತಮಗೆ ಸುಲಭವಾದದು ಯನಗೆ ಇಟ್ಟುಪೋದರೆಯಿಂದು ಗುಟ್ಟು ತೋರುತಲಿದೆ ಸಾಧಾರಣವಲ್ಲ ||1|| ದಿಟ್ಟವಾದಕ ವನಯನ್ನಿಂದಾದದಲ್ಲ ಬಿಟ್ಟಿಯವರಿಗೆ ತಿಳಿಯಲಿಹದೆ ಕೊಟ್ಟಿಗೆ ಮೇಲುಪ್ಪರಿಗೆಯಾಗುವದೆ ಹುಟ್ಟಾರಭ್ಯವಾಗಿ ಮಂದನಾಗಿದ್ದವಗೆ ಮಟ್ಟಯಿಲ್ಲದೆ ಬುದ್ಧಿ ಬರುವದೆಂತೊ ಧಿಟ್ಟಳಿ ಮಹಿಮ ಶಿರಿ ವಿಜಯವಿಠಲ ಮನ ಮುಟ್ಟಿ ಭಜಿಸಿದವ ದಾಸರ ಕರುಣವೆನ್ನಿ||2||

Thoughts & Reflections

0

No reflections shared yet. Be the first to share your thoughts!

Share your thought