Bhasaka
← Back to home

ಕಮಲೆ ನಿನ್ನಯ ಪಾದ ಕಮಲದಲ್ಲೆನಗೆ

Author: ವಿಜಯದಾಸCategory: ಶ್ರೀಮಹಾಲಕ್ಷ್ಮಿ
ಕಮಲೆ ನಿನ್ನಯ ಪಾದ ಕಮಲದಲ್ಲೆನಗೆ ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ ಗಜರಾಜ ಗಮನೆಯೆ ತ್ರಿಜಗದ್ವಂದ್ಯಳೆಂದು ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೇ ||1|| ಅಷ್ಟ ಸೌಭಾಗ್ಯ ವಿಶಿಷ್ಟವ ಕೊಟ್ಟು ಕಷ್ಟವ ತಿಳಿದು ಸಂತುಷ್ಟನ ಮಾಡಮ್ಮ ||2|| ಶ್ರೇಷ್ಠನ್ನ ಮಾಡು ಉತ್ಕøಷ್ಟನವನಿತ್ತು ಶಿಷ್ಟನೆಂದೆನಿಸಿ ಶ್ರೀಕೃಷ್ಣನ್ನ ರಾಣಿ||3|| ಅಜಭವ ಮೊದಲಾದ ದ್ವಿಜರಿಂದ ವಂದಿತಳೆ ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೆ ||4|| ದ್ವಿಜರಾಜಗಮನಳೆ ಭುಜಗಶಯನನಾದವಿಜಯವಿಠ್ಠಲನಂಘ್ರಿರಜವ ಧರಿಸುವೆ ||5||

Thoughts & Reflections

0

No reflections shared yet. Be the first to share your thoughts!

Share your thought