Bhasaka
← Back to home

ಕರುಣಿಸಯ್ಯಾ ಗುರುವರ್ಯ

Author: ವಿಜಯದಾಸCategory: ಇತರೆ
ಕರುಣಿಸಯ್ಯಾ ಗುರುವರ್ಯ ಪರಮ ಸುಹೃದಯಾ | ನಿರುತ ನಿನ್ನವನೊ ನಾನು ಪುರಂದರರಾಯ ಯಿಂದು ಲೋಕದ ಜನರು ತಮ್ಮ ಸುಕುಮಾರರಿಗೆ ಪೆಸರು | ಯಾಕೆ ಯಿಡವರೊ ಜೀಯ್ಯಾ | ನೇಕ ಮಮತೆಯಲಿ || ಬೇಕೆ ಎನಗೆ ಯಿಂಥಸ್ ಖ್ಯಾತಿ ನೀ ಕೊಟ್ಟ ಭಾಗ್ಯವೆಯಿರಲಿ | ವಾಕು ವ್ಯರ್ಥವಾಗದಂತೆ ಸಾಕುವದು ಬಿಡದೆ ಒಲಿದು ||1|| ಅಡವಿ ಹತ್ತಿ ಪೋಪ ನರನ ಒಡನೆ ಕೂಡಿಕೊಂಡು ಬಂದು | ಕಡು ಮಹೋತ್ಸವವ ಮಾಡಿ ವೇಗ ಪೊಡವಿಪತಿತನವು || ಧೃಢವಾಗಿ ವಾದಿಸಿ ಅವನ ತೊಡರು ಕಳೆದು ಸರ್ವರೊಳಗೆ | ನಡತಿವಂತ ಮಾಡಿದಂತೆ ಬಡವನ್ನಾ ಉದ್ಧರಿಸು ನಿ||2|| ಕೀರ್ತಿಯಪಕೀರ್ತಿ ಎರಡು ಪೆತ್ತ ತಂದೆ ಯಿರಲಾಗಿ ಪುತ್ರನೀಗೆ ಬರುವಾವೆ ಉತ್ತಮರು ಮೆಚ್ಚುವಂತೆ ನಿತ್ಯವೊಲಿದು ಪಾಲಿಪದು ಎತ್ತಲಿದ್ದರೂ | ಸತ್ಯ ವಿಜಯವಿಠ್ಠಲನ್ನ | ತುತ್ತಿಸುವ ಮಹಾಮಹಿಮಾ ||3||

Thoughts & Reflections

0

No reflections shared yet. Be the first to share your thoughts!

Share your thought