Bhasaka
← Back to home

ಕರುಣಿಸೋ ಕೃಷ್ಣ ಕರುಣಿಸೊ

Author: ವಿಜಯದಾಸCategory: ಶ್ರೀಕೃಷ್ಣ
ಕರುಣಿಸೋ ಕೃಷ್ಣ ಕರುಣಿಸೊ | ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ ಭೂತಳದೊಳು ನಾನು ಈ ತನುವುತೆತ್ತು | ಪಾತಕದಲಿ ಯಮಯಾತನೆ ಪಟ್ಟೆ ||1|| ಇಂದೆನ್ನ ಹೃದಯವೆಂಬೊ ಮಂದಿರದೊಳು | ಬಂದು ವಾಸವಾಗೊ ಇಂದಿರೆ ರಮಣ ||2|| ಹಿಂದಿನ ಅವಗುಣ ಒಂದೂ ಎಣಿಸದೆ | ಮುಂದೆ ದೋಷಕ್ಕೆ ಮನವೆರಗಿಸದೆ ||3|| ಪಾಪ ಪುರುಷನೆಂಬೊ ಪಾಪಿಯ ಕೈಗೆ | ಪೋಪಗೊಡದೆ ಎನ್ನ ಕಾಪಾಡೊ ರನ್ನ ||4|| ಅಂತ್ಯಕಾಲದಲಿ ಅಂತಕರು ಬಂದು | ನಿಂತಾಗಲಿ ನಿನ್ನ ಚಿಂತೆ ಒದಗಲಿ ||5|| ಕನಸಿನೊಳಗೆ ನಿನ್ನ ನೆನಸಿಕೊಂಬಂತೆ | ಮನಸು ಸುಸ್ಥಿರವಾಗಲಿ ಅನುಗಾಲವಿರಲಿ ||6|| ಇದ್ದಾಗ ದಾಸರದಾಸನೆನಿಸೊ ಬೇಗ | ಅಬ್ಧಿಶಯನ ಸಿರಿ ವಿಜಯವಿಠ್ಠಲ ಕರುಣಿಸೊ||7||

Thoughts & Reflections

0

No reflections shared yet. Be the first to share your thoughts!

Share your thought