Bhasaka
← Back to home

ಕಲ್ಲಿನಿಂದ ಸರ್ವ ಫಲ ಬಾಹುದೊ

Author: ವಿಜಯದಾಸCategory: ಶ್ರೀಕೃಷ್ಣ
ಕಲ್ಲಿನಿಂದ ಸರ್ವ ಫಲ ಬಾಹುದೊ | ಕಲ್ಲು ಭಜಿಸಿದರೆ ಕೈವಲ್ಯ ತೋರುವುದೊ ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು | ಕಲ್ಲು ಎತ್ತಲು ಮಳೆಯೊಳೆಲ್ಲವರು ಉಳಿದರು | ಕಲ್ಲು ಹರಿಪಾದವನು ಸೋಕೆ ಹೆಣ್ಣಾಯಿತು | ಕಲ್ಲು ಲಂಕೆಗೆ ಮಾರ್ಗ ಚೆನ್ನಾಗಿ ಶೋಭಿಸಿತು||1|| ಕಲ್ಲಿನೊಳಗೆ ದೇವನೊಡಮೂಡಿ ಕಾಣಿಸುವ | ಕಲ್ಲು ಕೊರೆಯಲು ಮೂರ್ತಿ ಮಂತಾಹುದು | ಕಲ್ಲು ದೇವರ ಗುಡಿಗೆ ಗರುಡ ಗಂಬವು ಆಯ್ತು | ಕಲ್ಲು ಕೋಟ್ಯಾನು ಕೋಟಿಗೆಲ್ಲ ಬೆಲೆಯಾಯ್ತು||2|| ಕಲ್ಲೆಂದುಪೇಕ್ಷಿಸದೆ ಕಾಲಕಾಲದಿ ನಿಮ್ಮ | ಕಲ್ಲು ಮನಸನು ಬಿಟ್ಟು ಪೂಜೆಮಾಡಿ | ಕಲ್ಲಿನೊಳಗಿದ್ದು ಸಿರಿ ವಿಜಯವಿಠ್ಠಲ ಒಳ್ಳೆ | ಕಲ್ಲು ಪದವಿಯ ಕೊಟ್ಟು ಸತತ ಪಾಲಿಪನೊ ||3||

Thoughts & Reflections

0

No reflections shared yet. Be the first to share your thoughts!

Share your thought