Bhasaka
← Back to home

ಕಾದನಾ ವತ್ಸವ ಹರಿ ಕಾದನಾ

Author: ವಿಜಯದಾಸCategory: ಶ್ರೀಕೃಷ್ಣ
ಕಾದನಾ ವತ್ಸವ ಹರಿ ಕಾದನಾ | ಮೋದದಿಂದ ಮಾಧವ ವೇದವೇದ್ಯ ಸಾಧುವಿನುತರಾದಿಕಾ ರಮಣ ಕೃಷ್ಣ ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ || ಕೊಳಲು ಕೈಲಿ ಪಿಡಿದು ಮುರಲಿಗಾನ ಮಾಡುತ್ತಾ ||1||| ತನ್ನ ಶೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಿಸಿ | ತಿನ್ನು ತಿನ್ನು ಪುಲ್ಲು ಯೆನುತ ಘನ್ನ ಕರುಗಳೊತ್ತುತ್ತ ||2|| ಉಡುಗಳಂತೆ ಕರಗಳು ನಡುವೆ ಚಂದ್ರ ಧರೆಯೊಳು || ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು||3|| ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು | ಬಂದು ವರುಷ ಕರುಗಳಂತೆ ಆನಂದದಿಂದ ಬೆಳೆದವು ||4|| ಕನಕ ರಜತ ಸರಪಳಿ ದನಕರುಗಳ ಕೊರಳಲ್ಲಿ | ಇಣಕುವಂತರಳೆಲೆ ಅನೇಕ ನಾದ ಬೆರಳಲಿ ಮಾಡುತ||5|| ಮರದ ನೆರಳು ವೊಳಗೆ ಕೃಷ್ಣ | ಮೆರೆದು ವತ್ಸಗಳನೇ ನಿಲಿಸಿ | ಕರೆದ ಪಾಲು ಕರದಿ ಪಿಡಿದು ನೆರೆದು ಬಾಯಲುಣಿಸುತ||6|| ಅಜಗಳ್ಹಾಂಗ ಇದ್ದ ಕರುಗಳು ಗಜಗಳ್ಹಾಂಗ ಆದವು | ತ್ರಿಜಗದೊಡೆಯ ವಿಜಯವಿಠ್ಠಲ ವ್ರಜಕೆ ದೊರೆಯಾಳುವ ||7||

Thoughts & Reflections

0

No reflections shared yet. Be the first to share your thoughts!

Share your thought