← Back to home
ದೇವನೆ ಎನ್ನನು ಮರೆಯುವುದುಚಿತವೆ
Author: ಸ್ವಾಮಿ ಹರ್ಷಾನಂದCategory: ವೈರಾಗ್ಯRaaga: ಪುಷ್ಪಲತಾTaala: ಆದಿತಾಲ
ॐ
ದೇವನೆ ಎನ್ನನು ಮರೆಯುವುದುಚಿತವೆ
ಸೇವೆಯ ಮಾಡುತ ಬಾಳನು ಸವೆಸಿಹೆ ||
ಪೂರ್ವದ ಜನ್ಮದ ಸುಕೃತ್ಯದಿಂದಲೆ
ಗುರುವಿನನುಗ್ರಹ ಪಡೆದೆನು ಆಗಲೆ ||
ಕೊರಗುತ ಹೃದಯದಿ ಪರಿಪರಿಯಿಂದಲಿ
ಶಿರವನು ಬಾಗಿಸಿ ಬೇಡುತಲಿರುವೆ ||
ಮನದಲಿ ಮುಸುಕಿದ ತಮವನು ದೂಡೋ
ಮನುಕುಲಪಾವನ ದರುಶನ ನೀಡೋ ||
Thoughts & Reflections
0No reflections shared yet. Be the first to share your thoughts!