Bhasaka
← Back to home

ಕಾಮಹರ ಒಬ್ಬ ತಾನೆ ಬಲ್ಲಾ

Author: ವಿಜಯದಾಸCategory: ಶ್ರೀರಾಮ
ಕಾಮಹರ ಒಬ್ಬ ತಾನೆ ಬಲ್ಲಾ | ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ | ಮೈಯಲಿ ದ್ವಾದಶ ಪುಂಡ್ರ ಧರಿಸಿ | ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು ||1|| ಫಣಿಯಾಭರಣವು ಪೆಡೆಯೆತ್ತಿ ಇರಲು | ಮಣಿ ಮಣಿ ರುಂಡಮಾಲೆ ತೂಗಾಡಲು | ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು ಕ್ಮಿಣಿ ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು ||2|| ಕಾಳಕೂಟದ ವಿಷಬಿಂದು ಮಾತುರನುಂಗೆ | ತಾಳಲಾರದೆ ತಳಮಳವಗೊಂಡು | ಕಾಳಿಮರ್ದನ ಕಮಲಾಯತಾಕ್ಷ ಎನ್ನ | ಪಾಲಿಸಿದ ಪರಮಾತ್ಮ ರಾಮನಲ್ಲದಿಲ್ಲವೆಂದು||3|| ಗಜಮುಖ ತಾಳವ ಪಿಡಿದು ತಥೈ ಎನ್ನಿ | ಅಜಸುತ ರಿಪು ಮದ್ದಳಿಯೆ ಮುಟ್ಟಿ | ಗಜ ಚರ್ಮಾಂಬರ ಗಾಯನವ ಮಾಡುತ-ತ್ರಿ | ಜಗಾಧಿಪತಿ | ವಿಷ್ಣು ರಾಮನಲ್ಲದಿಲ್ಲವೆಂದು ||4|| ಆರು ಮುಖದವ ಶಂಖವನ್ನು ಊದೆ | ಭೈರವ ನಾಗಸ್ವರವ ನುಡಿಸೆ | ಚಾರು ಪ್ರಥಮ ಭೂತ ತಲೆ ಚಪ್ಪಳಿಡೇ| ಧಾರಣಿಧರ ಸೀತಾರಾಮನಲ್ಲದಿಲ್ಲವೆಂದು ||5|| ಗೋರಾಜ ಸರಿಗಮಪದನಿಸ ಎಂದು ನಲಿಯೇ | ಉರಗಾದಿ ಮೂಷಕಾದಿ ಚಿಗಿದಾಡಲು | ವಾರಣದ ಗಂಗೆ ಸಿರದಲಿ ತುಳುಕಲು | ನಾರಾಯಣ ಪರದೈವ ರಾಮನಲ್ಲದಿಲ್ಲವೆಂದು ||6|| ತುಂಬುರನಾರಂದ ತಂದನ್ನಾತಾ ಎನ್ನೆ | ಅಂಬರದಿಂದ ಪೂಮಳೆಗೆರೆಯೆ | ಅಂಬುಜಪತಿ ಶಿರಿ ವಿಜಯವಿಠ್ಠಲ ವಿ ಶ್ವಂಭರಜಾಂಡಕರ್ತು ರಾಮನಲ್ಲದಿಲ್ಲವೆಂದು ||7||

Thoughts & Reflections

0

No reflections shared yet. Be the first to share your thoughts!

Share your thought