Bhasaka
← Back to home

ಕಾಯೆ ಕರುಣಾಂಬುಧಿಯೇ

Author: ವಿಜಯದಾಸCategory: ಶ್ರೀಮಹಾಲಕ್ಷ್ಮಿ
ಕಾಯೆ ಕರುಣಾಂಬುಧಿಯೇ | ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ಮಾಯೆ ನಾರಾಯಣನ್ನ ಜಾಯೆ ಸತತ ಜ್ಞಾನ | ವೀಯೆ ಭಕ್ತರ ಪ್ರೀಯೇ ಕನ್ನಾಮಣಿಯೆ ಕಾಮಿನಿ ಮಂಗಳವಾಣಿ | ಸನ್ನುತೆ ಲೋಕ ಜನನಿ | ನಿನ್ನ ಚರಣಯುಗ್ಮ | ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ | ಭಿನ್ನೆ ಭಾಗ್ಯಸಂಪನ್ನೆ || ಮನ್ನಿಸಿ ಮುದದಿಂದ | ಬಿನ್ನಪ ಲಾಲಿಸು | ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ ||1 || ಅತಿದಯವಂತೆ ನೀನೆಂದು ಬೇಗದಿ ಬಂದು | ನುತಿಸಿದೆ ದೀನನಾಗಿಂದೂ | ಪತಿತರೊಳಿಡದಲೆ | ಗತಿಗೆ ಸಮ್ಮೊಗಮಾಡು | ತ್ಪತ್ತಿ ಸ್ಥಿತಿ ಲಯಕರ್ತೆ ಅತುಳ ಶೋಭನಮೂರ್ತೆ | ಪತಿಯಲಿ ಜನಿಸಿದೆ| ಪತಿಗೆ ಸತಿಯಾದೆ | ಪತಿಯ ಸಂಗಡ ಜನಿತಳಾದ ಚರಿತೆ||2|| ಕುಂಕುವರತ ರಾಜಿತೆ ಧವಳಗೀತೆ | ಪಂಕಜಸದನೆ ಖ್ಯಾತೆ | ಲೆಂಕಾ ವತ್ಸಲೆ ಸರ್ವಾಲಂಕಾರ ಮಾಯೆ ರವಿ | ಸಂಕಾಸೆ ಬಹುಕಾಲ | ಸಂಕಟವ ವಿನಾಶೆ | ಮಂಕು ಮತಿಹರ ವಿಜಯವಿಠ್ಠಲನ |ಸಂಕಲ್ಪಕೆ | ಕಳಂಕವಾಗದಂತೆ||3||

Thoughts & Reflections

0

No reflections shared yet. Be the first to share your thoughts!

Share your thought