Bhasaka
← Back to home

ಕಾವನಯ್ಯಾ ಜಗವನನುದಿನ

Author: ವಿಜಯದಾಸCategory: ಶ್ರೀಕೃಷ್ಣ
ಕಾವನಯ್ಯಾ ಜಗವನನುದಿನ | ದೇವ ತಿರುಪತಿಯ ದಾಸಾ ಶ್ರೀ ವಲ್ಲಭವೆಂಕಟೇಶಾ ತರಳ ಉತ್ತಾನಪಾದಿಯ ನೋಡು | ಕರಿಯ ನೋಡು ಮಂದ ಕಾಯನ್ನ | ಕುರೂಪಿಯಾದ ಕುಬಜೆ ವ್ಯಭಿ | ಚರಿಯ ಅಜಮಿಳನ ಕಾಯದ ||1|| ಬಡವನಾಗಿದ್ದ ಸುಧಾಮ ಕೊಲೆ ಗಡಿಕನಾದ ಕಿರಾತನ್ನ ನೋಡು | ನಡತೆ ತಪ್ಪಿದ ಸುಗ್ರೀವ ಕುಲವ | ಕಡಿದ ಪಾರ್ಥನ್ನ ಕಾಯದಾ ||2|| ಇಟ್ಟಿಗೆ ವಗೆದ ಪುಂಡಲೀಕನ | ಬೆಟ್ಟಲೆ ಬೆಟ್ಟವ ನೆತ್ತಿಸಿದವನಾ | ಪೆಟ್ಟನು ಫಣಿಗೆಯಿಟ್ಟ ಭೀಷ್ಮನ | ಕಟ್ಟಿಬಿಗಿದ ಗೋಪಿಯ ಕಾಯದಾ||3|| ಜನನ ನೋಡು ವಿದುರನ್ನ ಕ ರುಣಿ ಎಂಬೆನೆ ರುಕುಮಾಂಗದ | ಮನೆ ಉಳ್ಳವರೆ ಸನಕಾದಿಗಳು | ಮಣಿಹಾಕಿಸಿದ ಭೂಪತಿಯ ಕಾಯದಾ||4|| ಶಕುತಿ ಮಿಕ್ಕಾದ ಕರ್ಮಗಳು ನೋಡಾ | ಭಕುತಿಗೆ ಮಾತ್ರ ಸಿಲುಕುವವನು | ಭಕುತವತ್ಸಲ ಶ್ರೀನಿವಾಸಾ | ಅಕಳಂಕ ರೂಪ ವಿಜಯವಿಠ್ಠಲ ||5||

Thoughts & Reflections

0

No reflections shared yet. Be the first to share your thoughts!

Share your thought