Bhasaka
← Back to home

ಕಿಂಕರನ ಧ್ವನಿಗೆ ಕೊಡು ಮತಿಯನು

Author: ವಿಜಯದಾಸCategory: ಶ್ರೀಸರಸ್ವತಿ
ಕಿಂಕರನ ಧ್ವನಿಗೆ ಕೊಡು ಮತಿಯನು ಪಂಕಜಾನಾಭನ ಸೊಸೆ ಸರಸ್ವತಿಯೆ ಸಕಲ ವಿದ್ಯಾರಂಭೆ ಕನಕ ಪುತ್ಥಳಿ ಬೊಂಬೆ ವಿಕಸಿತ ಸುಲಲಿತಾಂಬೆ ಸುನಿತಂಬೆ ನಿಕುರುಂಬೆ ಸುರರಂಭೆ ದಂತ ದಾಳಿಂಬೆ ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ||1|| ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ ಹಿಂಗಿಸಿ ಕೊಡು ಅಭಯ ಅಖಿಳ ಧ್ಯೇಯೆ ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ ||2|| ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ ನಯವಿನಯ ನೇತ್ರೆ ಪವಿತ್ರ ಅಜನ ಕಳತ್ರೆ ಜಯಜಯೆ ವಿಜಯ ಸಿರಿ ವಿಠ್ಠಲನ ಪೌತ್ರೆ ||3||

Thoughts & Reflections

0

No reflections shared yet. Be the first to share your thoughts!

Share your thought