Bhasaka
← Back to home

ಕೂಗಿತು ತಾಮ್ರದ ಚೂಡ

Author: ವಿಜಯದಾಸCategory: ಶ್ರೀಕೃಷ್ಣ
ಕೂಗಿತು ತಾಮ್ರದ ಚೂಡ ಕ್ಷೀರಸಾಗರಶಯನನಲ್ಲದಿಲ್ಲಹ ಪರ ಇಲ್ಲ್ಲೆಂದು ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ ಸೂಕ್ಕಿದವರ ಎದೆ ಜರ್ಝರಿಸೆ ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು||1|| ಒಂದು ಝಾವದಿ ಓಂಕಾರನೆಂದು ಕೂಗೆ ಇಂದಿರಾಪತಿ ವಿಧಿಜನಕನೆಂದೂ ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ ಬಿಂದುಮಾಧವನಲ್ಲದಿಹಪರವಿಲ್ಲವೆಂದು ||2|| ಎರಡು ಝಾವದಿ ಪುರುಷೋತ್ತಮನೆಂದು ಗರುಡಾಚಲ ನರಸಿಂಹನೆಂದು ಮೂರನೆ ಝಾವಕ್ಕೆ ವೀರನಾರಾಯಣ ಹರಿಗಯಾಗದಾಧರನಲ್ಲದಿಲ್ಲವೆಂದು||3|| ನಾಲ್ಕನೆ ಝಾವದಲಿ ಬದರಿವರನಿಲಯ ಏಕೋ ನಾರಾಯಣ ದೇವನೆಂದು ಶ್ರೀ ಕಂಚಿವರದನೆ ಐದನೆ ಝಾವಕ್ಕೆ ಗೋಕುಲಪತಿಯಲ್ಲದಿಹಪರ ಇಲ್ಲವೆಂದು ||4|| ಯಾಮ ಆರರೊಳು ವ್ಯಾಸಮೂರ್ತಿ ಎಂದು ರೋಮಕೋಟಿ ಬ್ರಹ್ಮರುದ್ರರೆಂದು ಸಾಮಗಾಯನ ಕಾವೇರಿ ರಂಗೇಶ ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು ||5|| ಏಳು ಝಾವದಿ ವೇಣಿಮಾಧವನೆಂದು ಮೇಲಗೋಟೆ ಚಳ್ಳಾಬಳ್ಳನೆಂದು ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ ಸಾಲಿಗ್ರಾಮನಲ್ಲದಿಲ್ಲಹ ಪರ ಇಲ್ಲೆಂದು6 ಝಾವ ಎಂಟರೊಳು ಶ್ವೇತ ವರಾಹನೆಂದು ಮಾವ ಮರ್ದನ ಜನಾದರ್ನನೆಂದು ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು ||7||

Thoughts & Reflections

0

No reflections shared yet. Be the first to share your thoughts!

Share your thought