Bhasaka
← Back to home

ಕೂಗಿದರು ಧ್ವನಿ ಕೇಳದೆ

Author: ವಿಜಯದಾಸCategory: ಶ್ರೀಕೃಷ್ಣ
ಕೂಗಿದರು ಧ್ವನಿ ಕೇಳದೆ ಶಿರ | ಬಾಗಿದರು ದಯ ಬಾರದೆ ಭೋಗಿಶಯನ ಭುವನಾಧಿಪತೇ ನಿನ್ನ | ಆಗಮನವೆಂದಿಗೆ ಆಗುವುದು ಪ್ರಭೊ ಭಕ್ತರಿಗೊಲಿದವ ನೀನು ಖರೆ ಎ| ನ್ನತ್ತ ನೋಡುವುದು ದೊರೆ || ಚಿತ್ತವಧಾನ ಪರಾಕು ಮಹಾಪ್ರಭು | ಎತ್ತಣ ರಥವನು ಎತ್ತಿ ಬಾ ನೀಡು ದೊರೆ||1|| ಸಿಂಧುಶಯನ ಶೇಷಾದ್ರಿ ವರ ಸಿರಿ | ಮಂದಿರ ಭಕ್ತ ಕುಟುಂಬಧರ || ಸುಂದರ ಮೂರುತಿ ಒಂದಿನ ಸ್ವಪ್ನದಿ | ಬಂದು ಪದದ್ವಯ ಚಂದದಿ ತೋರಿಸೊ||2|| ಕರುಣಾ ಶರಧಿಯು ನೀನಲ್ಲವೇ ಕೃಷ್ಣ | ಶರಣಾಗತರಿಗೆ ದೊರೆಯಲ್ಲವೆ || ಮೊರೆಹೊಕ್ಕವರಿಗೆ ಮರೆಯಾಗುವರೆ | ಸರಿಯೆ ಜಗದೊಳು ವಿಜಯವಿಠ್ಠಲರೇಯಾ ||3||

Thoughts & Reflections

0

No reflections shared yet. Be the first to share your thoughts!

Share your thought