Bhasaka
← Back to home

ಕೂಗೆಲೋ ಮನುಜ ಕೂಗೆಲೋ

Author: ವಿಜಯದಾಸCategory: ಶ್ರೀಕೃಷ್ಣ
ಕೂಗೆಲೋ ಮನುಜ ಕೂಗೆಲೋ ಸಾಗರಶಯನನೆ ಜಗಕೆ ದೈವವೆಂದು ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ ಸಚ್ಚಿದಾನಂದೈಕ ಸರ್ವೋತ್ತಮ ಸಚ್ಚರಿತ ರಂಗ ನಾರಾಯಣ ವೇದ ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು||1|| ನರಹರಿ ಮುಕುಂದ ನಾರಾಯಣ ದೇವ ಪರಮ ಪುರುಷ ಹರಿ ಹಯವದನ ಸಿರಿಧರ ವಾಮನ ದಾಮೋದರ ಗಿರಿ ಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು||2|| ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ ವರದ ಅಪಾರ ಸದ್ಗುಣನಿಲಯ ಮುರುಮರ್ದನ ಮಂಜು ಭಾಷಣ ಕೇಶವ ನಿರ್ಮಲ ದೇವ ಭೂವರಾಹಮೂರುತಿ ಯೆಂದು ||3|| ನಿಗಮವಂದಿತ ವಾರಿಜನಾಭ ಅನಿರುದ್ಧ ಅಘನಾಶ ಅಪ್ರಾಕೃತ ಶರೀರ ಸುಗುಣ ಸಾಕಾರ ಜಗದತ್ಯಂತ ಭಿನ್ನ ತ್ರಿಗುಣರಹಿತ ನರಮೃಗ ರೂಪಾನೆಂದು ||4|| ವಟಪತ್ರಶಯನ ಜಗದಂತರ್ಯಾಮಿ ಕಟಕ ಮುತ್ತಿನಹಾರ ಕೌಸ್ತುಭ ವಿಹಾರ ತಟಿತ್ಕೋಟಿ ನಿಭಕಾಯ ಪೀತಾಂಬರಧರ ನಿಟಿಲಲೋಚನ ಬಾಲವಟು ಮೂರುತಿಯೆಂದು||5|| ವಿಷ್ಣು ಸಂಕರುಷಣ ಮಧುಸೂದನ ಶ್ರೀ ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ ಜಿಷ್ಣು ಸಾರಥಿ ರಾಮ ಅಚ್ಯುತಾಧೋಕ್ಷಜ ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು ||6|| ಇಭರಾಜ ಪರಿಪಾಲ ಇಂದಿರೆಯರಸ ನಭ ಗಂಗಾಜನಕ ಜನಾದರ್ನನೆ ವಿಭುವೇ ವಿಶ್ವರೂಪ ವಿಶ್ವನಾಟಕ ಋ ಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು ||7|| ವೈಕುಂಠ ವಾಮನ ವಾಸುದೇವ ರಂಗ ಲೋಕೇಶ ನವನೀತ ಚೋರ ಜಾರ ಗೋಕುಲವಾಸಿ ಗೋವಳರಾಯ ಶ್ರೀಧರ ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು ||8|| ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ ಅಸುರ ಭಂಜನ ತ್ರಿವಿಕ್ರಮ ಕಪಿಲ ಕುಸುಮ ಶರನಯ್ಯ ಶಾರ್ಙಧರಾಚಕ್ರಿ ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು ||9|| ಸರ್ವನಾಮಕ ಸರ್ವಚೇಷ್ಟಕ ಸರ್ವೇಶ ಸರ್ವಮಂಗಳ ಸರ್ವಸಾರ ಭೋಕ್ತ ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ ಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು ||10|| ಈ ಪರಿ ಕೂಗಲು ಆಪತ್ತು ಪರಿಹಾರ ಅಪಾರ ಜನ್ಮ ಬೆಂಬಿಡದಲೆ ಸಪ್ತ ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ ಅಪವರ್ಗದಲ್ಲಿಟ್ಟು ಆನಂದಪಡಿಸುವ ||11||

Thoughts & Reflections

0

No reflections shared yet. Be the first to share your thoughts!

Share your thought