Bhasaka
← Back to home

ಕೃಷ್ಣ ಎನಗೆ ಬಂದರಿಷ್ಟವ

Author: ವಿಜಯದಾಸCategory: ಶ್ರೀಕೃಷ್ಣ
ಕೃಷ್ಣ ಎನಗೆ ಬಂದರಿಷ್ಟವ ಕಳೆದು ನಿನ್ನ ನಿಷ್ಠೆಯಲಿ ಇರುವಂತೆ ಇಷ್ಟೆ ಮಾತುರವೀಯೋ ನಿರ್ದೋಷ ಗುಣವಾರುಧಿ ನಿರ್ಧಾರವಾಗಿ ನುಡಿವೆ ಸಿದ್ಧಾಂತ ಮತದಲಿ ಪೊದ್ದಿಪದೆ ಸಾಕು ||1|| ಅಜ ಭವಾದ್ಯರು ನಿನ್ನ ಭಜಿಪರಾರು ದೋಷ ವ್ರಜದ ಮಾನವ ತಿಳಿದು ಭಜಿಸಬಲ್ಲೆನೆ ದೇವಾ ||2|| ಮಧ್ವ ಸರೋವರದಲ್ಲಿ ಇದ್ದು ಪೂಜೆಯಗೊಂಬ ಮುದ್ದು ವಿಜಯವಿಠಲ ಬಿದ್ದೆ ನಿನ್ನಯ ಪದಕೆ ||3||

Thoughts & Reflections

0

No reflections shared yet. Be the first to share your thoughts!

Share your thought