Bhasaka
← Back to home

ದೇವ ಬಂದಾ ನಮ್ಮ

Author: ಪುರಂದರದಾಸCategory: ಶ್ರೀಕೃಷ್ಣRaaga: ದೇಸ್Taala: ತ್ರಿತಾಲ
ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿರೋಮಣಿ ಬಂದನೋ || ಉರಗಶಯನ ಬಂದ ಗರುಡಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ || ಮಂದರೋದ್ದರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದನೋ । ನಕ್ರಹರನು ಬಂದ ಚಕ್ರಧರನು ಬಂದ ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ || ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ ಅಕ್ಷಯಫಲದ ಶ್ರೀಲಕ್ಷ್ಮೀರಮಣ ಬಂದ | ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ನಗೆಮುಖ ಪುರಂದರವಿಟ್ಠಲ ಬಂದನೋ ||

Thoughts & Reflections

0

No reflections shared yet. Be the first to share your thoughts!

Share your thought