Bhasaka
← Back to home

ಕೃಷ್ಣಾರ್ಪಿತವೆಂದು ಕೊಡುಲು

Author: ವಿಜಯದಾಸCategory: ಶ್ರೀಕೃಷ್ಣ
ಕೃಷ್ಣಾರ್ಪಿತವೆಂದು ಕೊಡುಲು ಎ-| ಳ್ಳಷ್ಟಾದರೂ ಮೇರು ಪರ್ವತ ಮೀರುವದು ಗಣ್ಯವಿಲ್ಲದೆ ಶಿಷ್ಯ ಸಹಿತ ಹರರೂಪ ಮುನಿ ರಣ್ಯದಲಿ ಪಾಂಡವರು ಇರಲು ಬಂದು || ಪುಣ್ಯಬೇಕೆಂದೆನಲು ಬಂದು ದಳ ಶಾಖಾ ಕಾ- ರುಣ್ಯದಲಿ ಹರಿ ಎನಲು ಅಪರಿಮಿತವಾದುದು ||1|| ಹಸ್ತಿನಾಪುರದಲ್ಲಿ ಸಕಲ ದೇವಾದಿಗಳ | ಮಸ್ತಕದ ಮಣಿ ವಿದುರನ ಮನೆಯಲ್ಲಿ || ಹಸ್ತು ಬಂದುದಕೆ ಉಪಾಯವೇನೆಂದೆನಲು | ಹಸ್ತದೊಳು ಪಾಲ್ಗುಡತಿಯೆರಿಯೆ ಮಿಗಿಲಾದುದೊ||2|| ಅಣು ಮಹತ್ತಾಗಲಿ ಆವಾವ ಕರ್ಮಗಳು | ತೃಣನಾದರರಿತು ಅರಿಯದೆ ಮಾಡಲು || ಕ್ಷಣ ತನ್ನದೆನ್ನದೆ ಅರ್ಪಿತನೆ ನಿಕ್ಷೇಪ | ಗುಣನಿಧಿ ವಿಜಯವಿಠ್ಠಲನ ಪುರದಲ್ಲಿ ||3||

Thoughts & Reflections

0

No reflections shared yet. Be the first to share your thoughts!

Share your thought