Bhasaka
← Back to home

ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ

Author: ವಿಜಯದಾಸCategory: ಶ್ರೀಮಹಾಲಕ್ಷ್ಮಿ
ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ ವಲ್ಲಭೆ ಬಲು ಸುಲಭೆ ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ ಲೋಕ ಜನನಿ ಕಾಮಿನಿಸಾಕಾರ ಗುಣವಂತೆ ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ||1|| ಕೋಲ ಮುನಿಗೊಲಿದಮಲ ಮೃಗನಾಭಿ ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ||2|| ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ ರವರವ ನರಕದಲ್ಲಿ ಬವಣೆಪಟ್ಟ ಮೇಲೆ ಸವಿಯದಂತೆ ತಮಸುನಿವಹದೊಳಗೆ ಇಪ್ಪನು ||3|| ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು ತಾಮಸಗಳ ಕಳೆದು ನಿಷ್ಕಾಮ ಫಲ ಪಾಲಿಪೆ||4|| ಧರೆಯೊಳು ಷೋಡಶಗಿರಿಯ ಪ್ರಾದೇಶ ಮಂ ದಿರ ರಚಿಸಿಕೊಂಡು ಇಪ್ಪೆ ವರವ ಕೊಡುವೆ ನಿತ್ಯ ಸಿರಿ ವಿಜಯವಿಠ್ಠಲನ್ನಪರಮ ಪ್ರೀತಿ ಅರ್ಧಾಂಗಿ ||5||

Thoughts & Reflections

0

No reflections shared yet. Be the first to share your thoughts!

Share your thought