Bhasaka
← Back to home

ಕೋಪವೆ ತಾಪ ಬ್ರಹ್ಮೇತಿ

Author: ವಿಜಯದಾಸCategory: ಶ್ರೀಕೃಷ್ಣ
ಕೋಪವೆ ತಾಪ ಬ್ರಹ್ಮೇತಿ ಶ್ರೀ ಪುರುಷ ಬಾಲ ಅಣುರೇಣುತ್ರಿಣಗಳಿಗೆಲ್ಲ ವಿಷ್ಣಪದೆ ಯಮುನೆ ಸರಸ್ವತಿ ಸಿಂಧು ಕಾವೇರಿ ಕೃಷ್ಣವೇಣಿ ಗೋದೆ ತುಂಗೆ ನರ್ಮದಾ ಇಷ್ಟು ಮಹಾನದಿಯಲ್ಲಿ ಮುಣಗಿ ಮಿಂದರೇನು ಕಾಷ್ಟಕಭ್ಯಾಂಗವನು ಮಾಡಿ ನೀರೆರದಂತೆ||1|| ಭಕುತಿಯಲಿ ನಡೆದು ಭವಿಷೊತ್ತರ ಪೇಳಿದರೇನೊ ವಿಕಳಮತಿಯಲಿಟ್ಟು ವರನಾದರೇನು ಕಕುಲಾತಿ ತೊರೆದು ನಿಷ್ಕಳಂಕನಾದರೆ ಏನು ಶುಕಪಕ್ಷಿ ಅನುಗಾಲ ಓದಿ ತಿಳಿದಂತೆ ||2|| e್ಞನದಲ್ಲಿ ಪರರಿಗೆ ನ್ಯಾಯ ಪೇಳಿದರೇನು ಹಾನಿ ನೆನೆಸಿ ಕೀರ್ತಿಯ ಪಡೆದರೇನು ಧ್ಯಾನದಲಿ ಮಾನಸ ಪೂಜೆ ಮಾಡಿದರೇನು ಶ್ವಾನದಲಿ ಬೂದಿಯೊಳಗೆ ವರಗಿ ಇದ್ದಂತೆ ||3|| ಯಾತ್ರೆ ತೀರ್ಥಂಗಳು ತೊಳಲಿ ತಿರುಗಿದರೇನು ಪಾತ್ರಾಪಾತ್ರನರಿದು ನಡೆದರೇನು ಗಾತ್ರವನು ಬಳಲಸಿ ನೇಮ ಮಾಡಿದರೇನು ಮೂತ್ರದಲಿ ತೊಳೆದು ಅಮೃತನ್ನ ಉಂಡಂತೆ ||4|| ವಡೆವ ಮಡಕಿಗೆ ಚಿಂತಾಮಣಿ ತಂದು ಹಚ್ಚಲು ಗಡಿಗಿ ಅಲ್ಲದೆ ಅದು ಪರುಶಾಗೋದೆ ಬಿಡದೆ ಕೋಪಿಷ್ಠನು ಬಲು ಶಾಂತನೆನೆಸಿದರೆ ವೊಡಿಯ ಸಿರಿ ವಿಜಯವಿಠ್ಠಲನೊಲಿದು ಮೆಚ್ಚನಯ್ಯಾ ||5||

Thoughts & Reflections

0

No reflections shared yet. Be the first to share your thoughts!

Share your thought