Bhasaka
← Back to home

ಕ್ಲೇಶಮಾಡಲಿ ಬೇಡ ಮನವೆ ನೀನೂ

Author: ವಿಜಯದಾಸCategory: ಶ್ರೀಕೃಷ್ಣ
ಕ್ಲೇಶಮಾಡಲಿ ಬೇಡ ಮನವೆ ನೀನೂ ದೇಶದೊಳಗೆ ಕೇಳು ಜ್ಞಾನಿಗಳ ಸಮ್ಮತಾ ವಸಿಷ್ಠ ಮಹಾಋಷಿಗೆ ನೂರುಮಂದಿ ಸುತರು ಅಸಮಸಾಹಸರು ಬಲು ಶೀಲಜ್ಞರು ಕುಶಲದಲಿ ಇರುತಿದ್ದು ಕಾಲ ಮೃತ್ಯುವಿನ ಕೈ ವಶವಾಗಿ ಹೋದರದು ನೋಡು ದು:ಖವ ಬಿಡು ||1|| ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠಪಿತ, ಪಾರ್ಥನು ಪಡೆದ ಶೂರ ಇಷ್ಟು ಜನ ಇರಲಾಗಿ ಅಭಿಮನ್ಯು ದೇಹವನು ಬಿಟ್ಟು ಪೋಗಲು ಒಬ್ಬರಾದರು ಉಳುಹಿದರೆ||2|| ಇಂಥವರಿಗೀತ್ಯರನು ನಿನಗಾವ ಸ್ವಾತಂತ್ರ್ಯ ಸಂತೋಷವೆ ಬಡು ಧೈರ್ಯದಲ್ಲಿ ಕಂತು ಜನಕ ನಮ್ಮ ವಿಜಯವಿಟ್ಠಲನಂಘ್ರಿ ಅಂತರಂಗದಲಿಡು ಮುಂದಿನಗತಿ ಬೇಡು ||3||

Thoughts & Reflections

0

No reflections shared yet. Be the first to share your thoughts!

Share your thought