Bhasaka
← Back to home

ಗಂಗೆ ಸನ್ಮಂಗಳಾಂಗೆ

Author: ವಿಜಯದಾಸCategory: ಶ್ರೀಗಂಗೆ
ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ ತುಂಗೆ ಕಾರುಣ್ಯ ಪಾಂಗೆ ಅಸಿತಾಂಗೆ ತಿಂಗಳಾನನೆ ಪರಮೇಷ್ಟಿ ಪಾತ್ರಜಾತೆ ವರುಣನ್ನ ನಿಜದೈಯಿತೆ ಸುರ ಮುನಿಗಣವಿನುತೆ ವರದಾತೆ ಸರ್ವಖ್ಯಾತೆ ತರಣಿಸುತನ ಉದ್ಧರಿಸಿದೆ ಕರುಣದಿ ಧರೆಯೊಳು ನಿನಗೆ ಎ ದುರುಗಾಣೆ ಶರಣಾ ||1|| ಭಯ ಪಾಪ ತಾಪದೊರೆ ಜಯ ಜಯ ಗುಣಸಾರೇ ತ್ರಯಭುವನ ಉದ್ಧಾರೆ ಆಯುತಾರ್ಕವರ್ನ ನೀರೆ ನಯವ ಭಕುತಿ ಹೃ ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ||2|| ಘನ್ನ ವಾರಣಾಸಿ ಕಾಸಿವನ ಆನಂದ ನಿವಾಸಿ ಪ್ರಣತ ಜನರಘನಾಶ ಮಣಿಭೂಷೆ ಸೌಖ್ಯರಾಸಿ ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೇ ||3||

Thoughts & Reflections

0

No reflections shared yet. Be the first to share your thoughts!

Share your thought